ಕರ್ನಾಟಕಮೈಸೂರು

ಬೈಲಕುಪ್ಪೆಯಲ್ಲಿ ಭದ್ರತಾ ದಳಗಳ ಪಥಸಂಚಲನ

ಬೈಲಕುಪ್ಪೆ: ಕೊಪ್ಪ ಗ್ರಾಮದಿಂದ ಬೈಲಕುಪ್ಪೆ ಗ್ರಾಮದವರೆಗೆ ರ‍್ಯಾಪಿಡ್ ಫೋರ್ಸ್ ಮತ್ತು ಪೊಲೀಸ್ ದಳಗಳಿಂದ ಎಸ್.ಪಿ. ಆದೇಶದ ಮೇರೆಗೆ ಪಥ ಸಂಚಲನ ನಡೆಸಿ ಜನತೆಗೆ ನಿಮ್ಮೊಂದಿಗೆ ನಾವಿದ್ದೇವೆ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂಬ ಸಂದೇಶ ಸಾರಲಾಯಿತು. ಆದರೆ, ಟಿಪ್ಪು ಜಯಂತಿ ಮುಗಿದ ನಂತರವೂ ಪಥಸಂಚಲನ ನಡೆಸುತ್ತಿದ್ದರಿಂದ ಆಶ್ಚರ್ಯಪಟ್ಟ ಜನತೆ ಮತ್ತೇನಾದರು ಅಹಿತಕರ ಘಟನೆ ನಡೆಯಿತೇ ಎಂದು ಜನ ಪ್ರಶ್ನಿಸುತ್ತಿದ್ದುದು ಕಂಡು ಬಂತು. ಪಿರಿಯಾಪಟ್ಟಣ ವೃತ್ತ ನಿರೀಕ್ಷಕ ಸಿದ್ದಯ್ಯ, ಬೈಲಕುಪ್ಪೆ ಪಿಎಸ್ಐ ಪಿ.ಲೊಕೇಶ್, ಬೈಲಕುಪ್ಪೆ ಪೋಲಿಸ್ ಸಿಬ್ಬಂದಿ ಭಾಗವಹಿಸಿದ್ದರು.

Leave a Reply

comments

Related Articles

error: