ಕರ್ನಾಟಕ

ರಿಕ್ಷಾದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ

ರಾಜ್ಯ(ಮಂಡ್ಯ)ನ.16:- ಹೆರಿಗೆಗಾಗಿ ಆಗಮಿಸಿ ಮನೆಯವರು ಆಸ್ಪತ್ರೆಯಿಂದ ಚೀಟಿ ಪಡೆಯುವಷ್ಟರಲ್ಲೇ ಮಹಿಳೆ ರಿಕ್ಷಾದಲ್ಲೇ ಮಗುವಿಗೆ ಜನ್ಮನೀಡಿದ ಘಟನೆ  ಮಂಡ್ಯ ಮಿಮ್ಸ್ ಆಸ್ಪತ್ರೆ ಮುಂಭಾಗ ನಡೆದಿದೆ.

ಮಂಡ್ಯ ಷುಗರ್ ಟೌನ್ ನಿವಾಸಿ ರವಿಯವರ ಪತ್ನಿ ಸವಿತ ಎಂವವರು ಹೆರಿಗೆ ನೋವಿನಿಂದ ಆಸ್ಪತ್ರೆಗೆ ಆಗಮಿಸಿದ್ದರು. ಸವಿತ ಮನೆಯವರು ಆಸ್ಪತ್ರೆಗೆ ದಾಖಲಾಗಲು ಚೀಟಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದಿಂದ ರೋಗಿಗಳ ಸಂಖ್ಯೆ ಹೆಚ್ಚಳದಿಂದ ಸರತಿ ಸಾಲು ಉದ್ದವಿತ್ತು. ಚೀಟಿ ಪಡೆಯುವಷ್ಟರಲೇ ಹೆರಿಗೆ ನೋವುಂಟಾಗಿ ಆಟೋದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಷಯ ತಿಳಿದು ಆಸ್ಪತ್ರೆ ವೈದ್ಯರು ಆಟೋ ಬಳಿಯೇ ಧಾವಿಸಿ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.ಮುಷ್ಕರದಿಂದ ಹೆರಿಗೆಗೆ ಮಿಮ್ಸ್ ಆಸ್ಪತ್ರೆಗೆ ಬರುತ್ತಿರುವ ಗರ್ಭಿಣಿಯರಲ್ಲಿನ ಸಂಖ್ಯೆ  ಹೆಚ್ಚಳವಾಗಿದೆ.ಪ್ರತಿನಿತ್ಯ ಸರಾಸರಿ 17 ಹೆರಿಗೆಗಳು ಮಿಮ್ಸ್ ಆಸ್ಪತ್ರೆಯಲ್ಲಿ ಆಗುತ್ತಿತ್ತು. ಮುಷ್ಕರದಿಂದ ದಿನಕ್ಕೆ ಹೆರಿಗೆಯಾಗುವವರ ಸಂಖ್ಯೆ 20 ದಾಟಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: