ಮನರಂಜನೆ

ಬಾಲಿವುಡ್ ಬೆಡಗಿ ಶ್ರೀದೇವಿ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ

ದೇಶ(ಮುಂಬೈ)ನ.16:- ಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಬಾಲಿವುಡ್ ನಲ್ಲಿ ಹೊಸ ಮುಖಗಳನ್ನು ಪರಿಚಯಿಸುವಲ್ಲಿ ಸದಾ ಮುಂದಿರುತ್ತಾರೆ. ಈ ಬಾರಿ ತನ್ನ ಚಿತ್ರದಲ್ಲಿ ಹೊಸ ಮುಖಗಳಾದ ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಹಾಗೂ ನಟ ಸಾಹಿದ್ ಕಪೂರ್ ಸಹೋದರ ಅವರನ್ನು ಬಾಲಿವುಡ್ ಗೆ ಪರಿಚಯಿಸುತ್ತಿದ್ದಾರಂತೆ.

ಕರಣ ಜೋಹರ್ ಆಲಿಯಾ ಭಟ್ಟ, ವರುಣ್ ಧವನ್ ಅವರನ್ನು ಕೂಡ  ಈ ಹಿಂದೆ ಬಾಲಿವುಡ್ ಗೆ ಪರಿಚಯಿಸಿದ್ದರು. ಬುಧವಾರ ಸಂಜೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಮತ್ತು ಈಶಾನ್ ಖಟ್ಟರ್ ಅವರ ಅಭಿನಯದ ‘ಧಡಕ್’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಬಿಡುಗಡೆಯಾಗುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದೆ. ಧಡಕ್ ಮರಾಠಿ ಬ್ಲಾಕ್ ಬ್ಲಾಸ್ಟರ್ ಚಿತ್ರ ‘ಸೈರಾಟ್’ ರೀಮೇಕ್ ಆಗಿದ್ದು, ಇದು ಕೂಡ ಇಬ್ಬರು ಹೊಸಬರನ್ನು ಪರಿಚಯಿಸಿತ್ತು. ಈ ಚಿತ್ರಕ್ಕೆ ಮಹಾರಾಷ್ಟ್ರದಲ್ಲಷ್ಟೇ ಅಲ್ಲದೇ ಇಡೀ ದೇಶದಲ್ಲಿಯೇ ಪ್ರಶಂಸೆ ಲಭಿಸಿತ್ತು. ಕರಣ್ ಜೋಹರ್ ನಿನ್ನೆ ಸಂಜೆ ಜಾಹ್ನವಿ ಕಪೂರ್ ಮತ್ತು ಈಶಾನ್ ಇರುವ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. (ಎಸ್.ಎಚ್)

Leave a Reply

comments

Related Articles

error: