ಮೈಸೂರು

ಹದಗೆಟ್ಟ ರಸ್ತೆಗಳಿಗೆ ಕಾಯಕಲ್ಪ : ಧೂಳಿನಿಂದಾವೃತವಾದ ನಂಜನಗೂಡು

ನಂಜನಗೂಡು,ನ.16:- ನಗರದ ಪ್ರಮುಖವಾಗಿರುವ ಎರಡು ರಸ್ತೆಗಳು ಹದಗೆಟ್ಟಿದ್ದು ಶಾಸಕ ಕಳಲೆಕೇಶವಮೂರ್ತಿ ನೂತನ ರಸ್ತೆ ಮಾಡಲು ಕ್ರಮಕೈಗೊಂಡು ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ನಗರದ ಜನತೆಗೆ ಸಂತಸ ತಂದಿದ್ದರೂ ರಸ್ತೆಗಳೆಲ್ಲಾ ಮಣ್ಣಿನಿಂದಾವರಿಸಿ ನಂಜನಗೂಡು ಧೂಳುಮಯವಾಗಿದ್ದು ಇದರಿಂದ ಓಡಾಡಲು ಬಹಳ ತೊಂದರೆಯಾಗಿದೆ. ಈ ರಸ್ತೆಗಳಲ್ಲಿ 3-4 ಶಾಲೆಗಳಿದ್ದು, ಇದೇ ರಸ್ತೆಯಲ್ಲಿ ಎಲ್ಲಾ ವಾಹನಗಳೂ ಓಡಾಡುತ್ತಿವೆ. ಇದರಿಂದ ವಿಪರೀತ ಧೂಳು ಉಂಟಾಗಿ ಮಕ್ಕಳಿಗೆ, ಓಡಾಡುವವರಿಗೆ ಕೆಮ್ಮು, ಜ್ವರ ಅನೇಕ ಕಾಯಿಲೆಗಳು ಉಂಟಾಗಿರುವುದು ಸಾಮಾನ್ಯವಾಗಿದೆ. ಆದ್ದರಿಂದ ಸ್ಥಳೀಯರು ಮಕ್ಕಳು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಪ್ರತಿದಿನ ರಸ್ತೆಗಳಿಗೆ ಎರಡು ಮೂರು ಬಾರಿ ನೀರನ್ನು ಹಾಕಿಸಬೇಕು. ಜಿರೋ ಕ್ರಾಸ್‍ಯಿಂದ 18ನೇ ಕ್ರಾಸಿನವರೆಗೂ ಲಿಂಕ್ ರಸ್ತೆಗಳಿವೆ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್‍ಸ್ಟ್ಯಾಂಡ್ ಮುಂಭಾಗ ಕಾಲುವೆ ಪಕ್ಕದಲ್ಲಿ ಲಿಂಕ್ ರಸ್ತೆ ಇದೆ. ಈ ರಸ್ತೆಯು ತುಂಬಾ ಹಳ್ಳಕೊಳ್ಳಗಳಿಂದ ಕೂಡಿದೆ ಯಾವುದೇ ವಾಹನ ಓಡಾಡಲು ಸಾಧ್ಯವಿಲ್ಲವಾಗಿದೆ. ಇದನ್ನೂ ಕೂಡ ಮುಚ್ಚಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಾಲುವೆಗೆ ಸ್ಲಾಬ್ ಹಾಕಿ ಮೇಲ್ಭಾಗವನ್ನು ಮುಚ್ಚಲಾಗಿದೆ. ಈ ಕಾಲುವೆಯು ಪ್ರತಿ ಕ್ರಾಸ್‍ಗೂ ಲಿಂಕ್ ಆಗಿದೆ. ಜೊತೆಗೆ ಇದರ ಮೇಲೆ ಓಡಾಡಲು ಅನುಕೂಲವಾಗಿದೆ. ಇದರ ಸುತ್ತ ನಗರಸಭೆ ವತಿಯಿಂದ ಕಬ್ಬಿಣದ ಮೆಸ್ ವರ್ಕ್ ಮಾಡಿದ್ದಾರೆ ಇದನ್ನು ತೆಗೆಸಬೇಕು ಹಾಗೂ ಕಾಲುವೆ ಮೇಲೆ ಇರುವ ಹಳೇ ಗಾಡಿಗಳು ರಿಪೇರಿ ಮಾಡಲು ಶುರು ಮಾಡಿದ್ದಾರೆ. ಜೊತೆಗೆ ಅನೇಕ ಗುಜರಿಗಳು ತಲೆ ಎತ್ತಿವೆ. ಇವೆಲ್ಲವನ್ನು ಎತ್ತಿಸಿ ನೂತನ ರಸ್ತೆ ಆಗುವವರೆಗೂ ಸಾರ್ವಜನಿಕರಿಗೆ ಶಾಲಾ ಮಕ್ಕಳಿಗೆ ವಾಹನಗಳಿಗೆ ತಿರುಗಾಡಲು ಅನುವು ಮಾಡಿಕೊಡಬೇಕೆಂದು ನಗರಸಭೆ, ಶಾಸಕರನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: