ಮೈಸೂರು

ಹುಟ್ಟಿನಿಂದನೇ ಶ್ರವಣದೋಷ ಪತ್ತೆ ಹಚ್ಚಿ : ಡಾ.ಪ್ರವೀಣ್ ರಾಯನಗೌಡ ಸಲಹೆ

ಮೈಸೂರು, ನ. 16 : ಹುಟ್ಟಿನಿಂದಲೇ ಕಂಡು ಬರವು ಶ್ರವಣ ಸಮಸ್ಯೆಯನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಮಕ್ಕಳು ಸಮಾಜಕ್ಕೆ ಹೊರೆಯಾಗದೆ ಸಮರ್ಥರನ್ನಾಗಿಸಬಹುದು ಆಡಿಯೋಲಾಜಿಸ್ಟ್ ಡಾ.ಪ್ರವೀಣ್ ರಾಯನಗೌಡರ್ ಅಭಿಪ್ರಾಯಪಟ್ಟರು.

ಇತ್ತೀಚೆಗೆ ಜನಿಸುವ ಮಕ್ಕಳಲ್ಲಿ ಅಂಧತ್ವ, ಕಿವುಡುತನ ಹೆಚ್ಚುತ್ತಿದ್ದು ಅಂತಹ ಮಕ್ಕಳಿಗೆ ಶೀಘ್ರವೇ ಚಿಕಿತ್ಸೆ ಕೊಡಿಸಬೇಕು, ಇದರಿಂದ ಮಕ್ಕಳಲ್ಲಿ ಅಂಗಾಂಗ ನ್ಯೂನ್ಯತೆಯನ್ನು ತಡೆಯಬಹುದು. ಶ್ರವಣದೋಷವನ್ನು ಹುಟ್ಟಿನಲ್ಲಿಯೇ ಪತ್ತೆ ಹಚ್ಚಬಹುದಾಗಿದ್ದು, ಈ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕೆಂದು, ಶ್ರವಣದೋಷವುಳ್ಳ ಮಕ್ಕಳಿಗೆ ನೆರವು ನೀಡಲು ನಗರದ ರೋಟರಿ ವೆಸ್ಟ್ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡಫ್ ಚಿಲ್ಡ್ರನ್ ಸ್ಕೂಲ್ ಶ್ರವಣದೋಷವುಳ್ಳ ಮಕ್ಕಳ ಪೋಷಕರ ಸಂಘ ಮುಂದಾಗಿದೆ ಎಂದು ಹೇಳಿದರು.

ಇದೇ ಮೊದಲ ಬಾರಿಗೆ ಶ್ರವಣದೋಷವುಳ್ಳ ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮೂಲಕ ಕಾಕ್ಲಿಯರ್ ಎಂಬ ವಿನೂತನ ಯಂತ್ರ ಅಳವಡಿಸುವ ಮೂಲಕ ಸಂಸ್ಥೆಯು ಹೊಸ ಹೆಜ್ಜೆ ಮೂಡಿಸಿದೆ, 5 ವರ್ಷದೊಳಗಿನ ಮಕ್ಕಳಿಗೆ ಈ ಶಸ್ತ್ರ ಚಿಕಿತ್ಸೆ ಮಾಡಬಹುದಾಗಿದ್ದು, ಚಿಕಿತ್ಸಾ ವೆಚ್ಚ ತುಸು ದುಭಾರಿಯಾಗಿದ್ದರು, ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಧನ ಸಹಾಯ ನೀಡುವುದು ಎಂದು ಗುರುವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಂತ್ರ ಅಳವಡಿಸಿದ ನಂತರ ಮಕ್ಕಳಿಗೆ ಕಿವಿ ಕೇಳುವುದರಿಂದ ಮಾತು ಬರಲು ಸುಲಭವಾಗುವುದು, ಬಿಪಿಎಲ್ ಕಾರ್ಡ್ ದಾರರಿಗೆ ವಿಶೇಷ ರಿಯಾಯಿತಿ ಇದೆ, ಒಂದು ವರ್ಷದೊಳಗೆ ಶಸ್ತ್ರ ಚಿಕಿತ್ಸೆ ನಡೆಸಿದರೆ ಪರಿಣಾಮಕಾರಿಯಾಗಲಿದೆ, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಆಡಿಯೋಲಾಜಿಸ್ಟ್ ಅವಶ್ಯವೆಂದರು.

ರೋಟರಿ ವೆಸ್ಟ್ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡಫ್ ಚಿಲ್ಡ್ರನ್ ಸ್ಕೂಲ್ ನ ಪರಿಮಳ ರೇವಣ್ಣ ಮಾತನಾಡಿ ಸಂಸ್ಥೆಯು ಈಗಾಗಲೇ ನೂರು ಮಕ್ಕಳಿಗೆ ಈ ಯಂತ್ರ ಅಳವಡಿಸಿದೆ, ಈಗಾಗಲೇ ಚಿಕಿತ್ಸೆಗೊಳಗಾದ ಮಕ್ಕಳು ಸರ್ವಾಗೀಣಾಭಿವೃದ್ಧಿಗೊಂಡಿದ್ದು, ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ನಮ್ಮ ಸಂಸ್ಥೆಯು ದಾನಿಗಳ ಸಹಯೋಗದೊಂದಿಗೆ ಬಡವರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಉಮಾ ರಾಯನ ಗೌಡರ್, ಗಾಯತ್ರಿ, ರಾಜ್ಯದ ವಿವಿದೆಡೆಯಿಂದ ಬಂದಿದ್ದ ಶಸ್ತ್ರಚಿಕಿತ್ಸೆಗೊಳಗಾದ ಮಕ್ಕಳು, ಪೋಷಕರು ಇದ್ದರು (ವರದಿ : ಕೆ.ಎಂ.ಆರ್)

Leave a Reply

comments

Related Articles

error: