ಮೈಸೂರು

ಚಿಮಣಿ ಮೇಲೇರಿ ಕಾರ್ಮಿಕನ ಪ್ರತಿಭಟನೆ

ಫಾಲ್ಕನ್ ಟೈರ್ಸ್ ಕಾರ್ಮಿರೊಬ್ಬರು 150 ಅಡಿ ಎತ್ತರದ ಚಿಮಣಿಯ ಮೇಲೆ ಹತ್ತಿ ಫ್ಯಾಕ್ಟರಿಯ ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸಿದರು. ಫ್ಯಾಕ್ಟರಿ ವಿರುದ್ಧ ಘೋಷಣೆಗಳನ್ನು ಕೂಗಿದ ಅವರು ಬಾಕಿ ಇರುವ ವೇತನವನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.

ಮೇಟಗಳ್ಳಿಯ ಪೊಲೀಸ್ ಇನ್ಸ್‍ಪೆಕ್ಟರ್ ಸುನಿಲ್, ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕನ ಮನವೊಲಿಸಿ ಕೆಳಗಿಳಿಸುವಲ್ಲಿ ಯಶಸ್ವಿಯಾದರು. ಫಾಲ್ಕನ್ ಫ್ಯಾಕ್ಟರಿಯ ಇತರ ಕಾರ್ಮಿಕರು ಮತ್ತು ಸ್ಥಳಿಯರು ಸ್ಥಳದಲ್ಲಿದ್ದರು.

ಇತ್ತೀಚಿಗೆ ಫಾಲ್ಕನ್ ಫ್ಯಾಕ್ಟರಿ ಮುಚ್ಚಿದ ಪರಿಣಾಮ ಹಲವು ಮಂದಿ ಕಾರ್ಮಿಕರಿಗೆ ಜೀವನ ಸಾಗಿಸುವುದು ಕಷ್ಟವಾಗಿದೆ. ಕೆಲ ಕಾರ್ಮಿಕರು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಬಾಕಿಯಿರುವ ವೇತನ ನೀಡುವಂತೆ ಫ್ಯಾಕ್ಟರಿಗೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ.

falcon-tyres-2-167x300falcon-tyres-1-768x427

 

Leave a Reply

comments

Related Articles

error: