ಕರ್ನಾಟಕ

ಆಮೆಕೆರೆಯಲ್ಲಿ ಕೃಷಿ ಮಾಡಲು ಅನುಮತಿಗೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ

ರಾಜ್ಯ(ಚಾಮರಾಜನಗರ)ನ.16:- ಆಮೆಕರೆಯಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡು ರೈತರಿಗೆ ಕೃಷಿ ಮಾಡಲು ಅವಕಾಶ ನೀಡುತ್ತಿಲ್ಲ ವಾರದೊಳಗೆ ಇದಕ್ಕೆ ಅವಕಾಶವನ್ನು ನೀಡಬೇಕೆಂದು ಆಗ್ರಹಿಸಿ ರೈತರು ಪ್ರತಿಭಟಿಸಿದರು.

ಈ ಬಗ್ಗೆ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಮಾತನಾಡಿ ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡುತ್ತಿಲ್ಲ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿ. ಎಚ್.ಎಸ್. ಮಹದೇವಪ್ರಸಾದ್ ಈ ಬಗ್ಗೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳ ಸಭೆ ನಡೆಸಿ ಭೂಮಿಗೆ ಪರಿಹಾರ ನೀಡುವ ಭರವಸೆ ನೀಡಿದ್ದರು. ಇದಾಗಿ 2 ವರ್ಷ ಕಳೆದರೂ ಇನ್ನೂ ಕ್ರಮ ವಹಿಸಿಲ್ಲ. ಪರಿಹಾರದ ಮೂರು ಪಟ್ಟು ಹಣ ನೀಡಬೇಕು. ಬೇರೆ ಕಡೆ ಜಮೀನು ಕೊಡಬೇಕು. ಅವರ ಕುಟುಂಬದವರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ನೀಡಬೇಕು ಇಲ್ಲದಿದ್ದಲ್ಲಿ ಅಲ್ಲಿ ವ್ಯವಸಾಯ ಮಾಡಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಮಹಾದೇವಯ್ಯ ಇಲ್ಲಿ ದಾಖಲೆಗಳಿದ್ದರೆ ವ್ಯವಸಾಯ ಮಾಡಲು ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಬಣ್ಣಾರಿ ಅಮ್ಮನ್ ಷುಗರ್ಸ್‍ನವರು ಈ ಭಾಗದ ರೈತರಿಂದ 16 ತಿಂಗಳಾದರೂ ಕಬ್ಬು ಕಟಾವು ಮಾಡುತ್ತಿಲ್ಲ ಇದರಿಂದ ಬ್ಯಾಂಕಿನಿಂದ ಕೃಷಿ ಸಾಲ ಪಡೆದವರಿಗೆ ಅನಾನುಕೂಲವಾಗುತ್ತದೆ. ಎಂದರು.

ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್ ವೈ.ಎಂ. ನಂಜಯ್ಯ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಖಾನೆಯ ಮಹಾದೇವಸ್ವಾಮಿ, ಹೊನ್ನೂರು ಬಸವಣ್ಣ, ಸಿದ್ದಲಿಂಗಸ್ವಾಮಿ, ಅಗ್ರಹಾರ ನಾಗರಾಜು, ಜಾನ್‍ಪೀಟರ್, ಶಿವಪ್ರಸಾದ್, ಅಂಬಳೆ ಶಿವಕುಮಾರ್,  ವೃಷಭೇಂದ್ರ, ರಂಗಸ್ವಾಮಿ, ಸೋಮಣ್ಣ, ಪುಟ್ಟಮಾದಪ್ಪ, ಸುಬ್ಬಣ್ಣ, ಮಹೇಶ್, ವೆಂಕಟರಾಮು ಇತರರು ಇದ್ದರು. (ಜಿ.ಎನ್,ಎಸ್.ಎಚ್)

Leave a Reply

comments

Related Articles

error: