ಮೈಸೂರು

ದೇಗುಲದ ಅರ್ಚಕರದು ಹತ್ಯೆಯಲ್ಲ : ಅಪಘಾತದಿಂದ ಸಾವು; ವೃತ್ತನಿರೀಕ್ಷಕರ ಸ್ಪಷ್ಟನೆ

ಮೈಸೂರು, ನ.17: – ದೇಗುಲದ ಅರ್ಚಕರೋರ್ವರನ್ನು ಯಾರೋ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆಂದು ಹೇಳಲಾಗಿತ್ತು. ಆದರೆ ಇದೀಗ ಅದು ಹತ್ಯೆಯಲ್ಲ. ಅಪಘಾತ ಎಂದು ನಂಜನಗೂಡು ವೃತ್ತ ನಿರೀಕ್ಷಕ ಗೋಪಾಲ್ ಕೃಷ್ಣ ಸ್ಪಷ್ಟಪಡಿಸಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಕಳೆದ ತಡರಾತ್ರಿ ಬದನವಾಳು ಗ್ರಾಮದ ಚಾಮುಂಡೇಶ್ವರಿ ದೇಗುಲದ ಅರ್ಚಕರನ್ನು ಹತ್ಯೆಗೈದ ಬಳಿಕ ದುಷ್ಕರ್ಮಿಗಳು ಅವರನ್ನು ಬೇಲಿಗೆ ಎಸೆದು ಪರಾರಿಯಾಗಿದ್ದಾರೆ ಎನ್ನಲಾಗಿತ್ತು. ಅರ್ಚಕರನ್ನು ತಮಿಳುನಾಡು ಮೂಲದ ಗುಡ್ಡಪ್ಪ (50) ಮೃತ ದುರ್ದೈವಿ. ಮೂರು ದಿನಗಳ ಹಿಂದಷ್ಡೇ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ತೆರಳುವ ಸಲುವಾಗಿ ಮಾಲೆ ಧರಿಸಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ವೃತ್ತ ನಿರೀಕ್ಷಕರು ಬದನವಾಳು ಗ್ರಾಮದ ಚಾಮುಂಡೇಶ್ವರಿ ದೇಗುಲದ ಅರ್ಚಕನನ್ನು ಹತ್ಯೆ ಮಾಡಲಾಗಿಲ್ಲ. ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಅರ್ಚಕರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಷಯವನ್ನು ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: