ಮೈಸೂರು

ರಾಜ್ಯಮಟ್ಟದ ಕ್ಷತ್ರಿಯ ವಧು-ವರರ ಸಮಾವೇಶ, ಪ್ರತಿಭಾ ಪುರಸ್ಕಾರ ನ.13ರಂದು

ರಾಜು ಕ್ಷತ್ರಿಯ ಮಹಾಮಂಡಳಿಯೂ ಉಚಿತ ವಧು-ವರರ ಸಮಾವೇಶ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡಿದೆ ಎಂದು ಅಧ್ಯಕ್ಷ ಆರ್.ಸತೀಶ್‍ ರಾಜು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮವನ್ನು ಗನ್ ಹೌಸ್ ಎದುರಿನ ಶ್ರೀವಿದ್ಯಾಶಂಕರ ಮಠದಲ್ಲಿ ನ.13ರ ಭಾನುವಾರ ಬೆಳಗ್ಗೆ 10ಕ್ಕೆ  ಇದೇ ಮೊಟ್ಟ ಮೊದಲ ಬಾರಿಗೆ ರಾಜ್ಯಮಟ್ಟದ ಕ್ಷತ್ರಿಯ ಜನಾಂಗದ ವಧು-ವರರ ಸಮಾವೇಶ ಆಯೋಜಿಸಲಾಗಿದ್ದು, ಉಡುಪಿ ಕೃಷ್ಣಮಠದ ಕ್ಷತ್ರಿಯಾ ಮಹಾಪೀಠದ ಗುರು ಶ್ರೀವಿಶ್ವಾಧಿರಾಜ ತೀರ್ಥಸ್ವಾಮೀಜಿ ಉದ್ಘಾಟಿಸುವರು. ಆರ್.ಸತೀಶ್ ರಾಜು ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಶಾಸಕ ಎಂ.ಕೆ.ಸೋಮಶೇಖರ್, ಕೃಷ್ಣರಾಜ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸಿ.ಮಲ್ಲಿಕ್, ಕರ್ನಾಟಕ ರಾಜ್ಯ ಕ್ಷತ್ರಿಯ ಸಂಘದ ಅಧ್ಯಕ್ಷ ಎಲ್.ಕೆ.ರಾಜು, ಹೊಸಪೇಟೆಯ ಗಣಿ ಮಾಲೀಕ ಕೆ.ಆರ್.ಕವಿರಾಜ್ ಅರಸ್, ಅರಸು ಮಹಾಸಭಾ ಅಧ್ಯಕ್ಷ ನಂದೀಶ್ ಹಾಗೂ ಇತರರು ಉಪಸ್ಥಿತರಿರುವರು.

ಅಂದು ಸಂಜೆ 4ಕ್ಕೆ ನಡೆಯುವ ಪ್ರತಿಭಾ ಪುರಸ್ಕಾರವನ್ನು ಮಹಾಪೌರ ಬೈರಪ್ಪ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸೋಮವಂಶ ಆರ್ಯಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಎಸ್.ರಾಘವೇಂದ್ರ ರಾಜು, ಶ್ರೀಶಾರದಾ ಮಹಿಳಾ ಮಂಡಳಿ ಅಧ್ಯಕ್ಷೆ ಎಲ್.ಜಯಲಕ್ಷ್ಮೀ, ಶ್ರೀಜಯಚಾಮರಾಜೇಂದ್ರ ಓಡೆಯರ್ ಸಲಹೆಗಾರ ಬಿ.ಭಾಸ್ಕರ್ ರಾಜ್  ಅರಸ್ ಹಾಗೂ ಇತರರು ಉಪಸ್ಥಿತರಿರುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಎನ್.ಬಾಲಕೃಷ್ಣರಾಜು, ಪ್ರಧಾನ ಕಾರ್ಯದರ್ಶಿ ಎಲ್.ಚಿನ್ನಕೃಷ್ಣರಾಜು, ಖಜಾಂಚಿ ಜಿ.ಪುಟ್ಟರಾಜು ನಿರ್ದೇಶಕರಾದ ಎಸ್.ಶಂಕರರಾಜು, ರಾಮಕೃಷ್ಣರಾಜು ಎಂ.ಎಸ್ ಹಾಗೂ ಮೋಹನರಾಜು ಎಸ್ ಉಪಸ್ಥಿತರಿದ್ದರು.

Leave a Reply

comments

Related Articles

error: