ಕರ್ನಾಟಕಪ್ರಮುಖ ಸುದ್ದಿ

ನ.17ರಿಂದ ಮಂಡ್ಯದಲ್ಲಿ ಪ್ರಶಸ್ತಿ ವಿಜೇತ ಸಿನಿಮಾಗಳ ಉಚಿತ ಪ್ರದರ್ಶನ

ಮಂಡ್ಯ (ನ.17): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಚಿತ್ರೋತ್ಸವ ಸಪ್ತಾಹ ಅಂಗವಾಗಿ ನವೆಂಬರ್ 17 ರಿಂದ 23 ವರೆಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಚಲನಚಿತ್ರಗಳ ಪ್ರರ್ದಶನವನ್ನು ಮಂಡ್ಯ ನಗರದ ಸಿದ್ದಾರ್ಥ ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ನವೆಂಬರ್ 17 ರಿಂದ 23ರ ವರೆಗೆ ಪ್ರತಿದಿನ ಸಂಜೆ 4.30 ಗಂಟೆಗೆ ಸಿದಾರ್ಥ ಚಿತ್ರಮಂದಿರದಲ್ಲಿ ಪ್ರದರ್ಶನ ನಡೆಯಲಿದ್ದು, ನವೆಂಬರ್ 17 ರಂದು ಅಮರಾವತಿ, ನ. 18 ರಂದು ಕಿರಿಕ್ ಪಾರ್ಟಿ, ನ. 19 ರಂದು ರಾಮ ರಾಮ ರೇ, ನ. 20 ರಂದು ಮದಿಪು (ತುಳು ಭಾಷೆ), ನ. 21 ರಂದು ಯೂ ಟರ್ನ್, ನ. 22 ರಂದು ಅಲ್ಲಮ ಹಾಗೂ ನವೆಂಬರ್ 23 ರಂದು ಮಾರಿಕೊಂಡವರು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಚಲನಚಿತ್ರದ ದರ್ಶನಕ್ಕೆ ಉಚಿತ ಪ್ರವೇಶಾವಕಾಶವಿದ್ದು, ಸಿನಿ ಪ್ರಿಯರು ಇದರ ಸದುಪಯೋಗ ಮಾಡಿಕೊಳ್ಳ್ಳುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.

(ಎನ್‍ಬಿಎನ್‍)

Leave a Reply

comments

Related Articles

error: