ಮೈಸೂರು

ಸಚಿವ ತನ್ವೀರ್ ಸೇಠ್ ವಿರುದ್ಧ ಪಿತೂರಿ ನಡೆದಿದೆ : ಬೆಂಬಲಿಗರ ಆರೋಪ

ಟಿಪ್ಪು ಜಯಂತಿಯ ವೇಳೆ ಅರೆನಗ್ನ ಚಿತ್ರಗಳನ್ನು ವೀಕ್ಷಿಸುತ್ತಿದ್ದ ತನ್ವೀರ್ ಸೇಠ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಿ ಎಂದು ಸರ್ಕಾರವನ್ನು ಒತ್ತಾಯಿಸಿ ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಂತೆ ಶುಕ್ರವಾರ ತನ್ವೀರ್ ಸೇಠ್ ಬೆಂಬಲಿಗರು ಸಚಿವರ ವಿರುದ್ಧ ಪಿತೂರಿ ನಡೆಯುತ್ತಿದೆ. ಸಚಿವರ ಬಳಿ ಈ ಕುರಿತು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ  ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.

ನರಸಿಂಹರಾಜ ಕ್ಷೇತ್ರದ ಸಾರ್ವಜನಿಕರು ಪ್ರತಿಭಟನೆ ನಡೆಸಿ ಮಾತನಾಡಿ, ಸಚಿವರು ಕಳೆದ 25ವರ್ಷಗಳಿಂದ ಸಾರ್ವಜನಿಕ ಸೇವೆಯನ್ನು ನಡೆಸಿಕೊಂಡು ಬಂದಿದ್ದಾರೆ. ಮಹಿಳೆಯರನ್ನು ತುಂಬಾ ಗೌರವದಿಂದ ಕಾಣುತ್ತಾರೆ. ಯಾರ ಬಳಿಯೂ ಏರುದನಿಯಲ್ಲಿ ಮಾತನಾಡಿಲ್ಲ. ಹೀಗಿರುವಾಗ ಅರೆನಗ್ನ ಚಿತ್ರಗಳನ್ನು ನೋಡಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರಿಗೆ ನಾಚಿಕೆಯಾಗಬೇಕು. ಅವರ ವಿರುದ್ಧ ನಡೆಯುತ್ತಿರುವ ಈ ಅಪಪ್ರಚಾರಗಳು ಕೇವಲ ಅವರ ತೇಜೋವಧೆಗೆ ಮಾತ್ರ. ಅವರ ಏಳಿಗೆ ಸಹಿಸಲಾರದವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಕಾರ್ಯಕರ್ತರು ಸಚಿವರಲ್ಲಿ ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು  ಈ ಸಂದರ್ಭ ಒತ್ತಾಯಿಸಿದರು.

Leave a Reply

comments

Related Articles

error: