ಮೈಸೂರು

ವೈದ್ಯರ ಮುಷ್ಕರಕ್ಕೆ ವಿರೋಧ : ಕಲಾವಿದನಿಂದ ವಿನೂತನ ಪ್ರತಿಭಟನೆ

ಮೈಸೂರು,ನ.17:- ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅದರ ನಡುವೆಯೇ ಕಲಾವಿದರೋರ್ವರು ಆಸ್ಪತ್ರೆ ಮುಂಭಾಗ ಚಿತ್ರ ಬಿಡಿಸುವ ಮೂಲಕ ವೈದ್ಯರ ನಡೆಯನ್ನು ಟೀಕಿಸಿದ್ದಾರೆ.

ಮೈಸೂರಿನ ಡರ್ಲಾಸ್ ಆಸ್ಪತ್ರೆ ಮುಂಭಾಗ ಬಾಯ್ತೆರದ ಮ್ಯಾನ್ ಓಲ್ ನ್ನು  ಬಳಸಿಕೊಂಡು ಪೇಂಟಿಂಗ್ ಮಾಡಿದ್ದು, ವೈದ್ಯರನ್ನು ಕಾರ್ಟೂನ್ ನಲ್ಲಿ ಬರುವ ಬ್ಯುಗಲ್ ಬಾಯ್ ಗೆ  ಕಲಾವಿದ ಬಾದಲ್ ನಂಜುಂಡಸ್ವಾಮಿ ಹೋಲಿಕೆ ಮಾಡಿದ್ದಾರೆ. ಬ್ಯುಗಲ್ ಬಾಯ್ ಎಂಬುವನು ಓರ್ವ ಕಳ್ಳ, ಎಲ್ಲವನ್ನೂ ನುಂಗುವವನಾಗಿದ್ದು,ಚಿತ್ರ ಕಲಾವಿದ, ನಟ ಬಾದಲ್ ನಂಜುಂಡಸ್ವಾಮಿ ವಿನೂತನ ಪ್ರತಿಭಟನೆ ನಡೆಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: