ಮೈಸೂರು

ವಿದ್ಯಾರ್ಥಿನಿ ನೇಣಿಗೆ ಶರಣು ಪ್ರಕರಣ : ಯುವಕನ ಮೇಲೆ ಮೃತಳ ತಾಯಿಯಿಂದ ದೂರು ದಾಖಲು

ಮೈಸೂರು,ನ.17:- ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ನ.13ರಂದು ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಶುಕ್ರವಾರ ಆಕೆಯ ತಾಯಿ ನಜರ್ ಬಾದ್ ಠಾಣೆಯಲ್ಲಿ ಯುವಕನೋರ್ವನ ವಿರುದ್ಧ ದೂರು ದಾಖಲಿಸಿದ್ದಾರೆ.

ಚಿಕ್ಕಮಗಳೂರು ಮೂಲದ ಚಂದನ(21) ಎಂಬಾಕೆ ಸಿದ್ದಾರ್ಥನಗರದ ಪಿ.ಜಿ.ಯೊಂದರಲ್ಲಿ ವಾಸಿಸುತ್ತಿದ್ದಳು. ಈಕೆ ಸೋಮವಾರ ಕಾಲೇಜಿಗೆ ತೆರಳದೆ ಪಿಜಿಯಲ್ಲಿಯೇ ಇದ್ದು, ಮಧ್ಯಾಹ್ನದ ವೇಳೆ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.  ಈ ಕುರಿತು ಸಿದ್ದಾರ್ಥನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶುಕ್ರವಾರ ಆಕೆಯ ತಾಯಿ ನಂದನ್ ಎನ್ನುವ ಯುವಕನ ವಿರುದ್ಧ ನಜರ್ ಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ನಂದನ್ ಸಿದ್ದಾರ್ಥ್ ಲೇ ಔಟ್ ನಿವಾಸಿ ಆಗಿದ್ದು, ನ.12ರಂದು ತನ್ನ ಮೇಲೆ ಹಲ್ಲೆ ನಡೆಸಿದ್ದ ಎಂದು ಚಂದನ ತಾಯಿಗೆ ತಿಳಿಸಿದ್ದಳಂತೆ. ಅಷ್ಟೇ ಅಲ್ಲದೇ ಆತ ಆಕೆಗೆ ಪದೇ ಪದೇ ಹಿಂಸೆ ನೀಡುತ್ತಾನೆ ಎಂದು ಹೇಳಿಕೊಂಡಿದ್ದಳಂತೆ. ಇದರಿಂದ ಚಂದನಳ ತಾಯಿ ಮೈಸೂರಿಗೆ ಆಗಮಿಸಿ ನಜರ್ ಬಾದ್ ಠಾಣೆಯಲ್ಲಿ ನಂದನ್ ವಿರುದ್ಧ ದೂರು ನೀಡಿದ್ದು, ಎಫ್ ಐ ಆರ್ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: