ಕ್ರೀಡೆ

ಹಾಕಿ ವಿಶ್ವ ಲೀಗ್ ಗೆ ಭಾರತ ತಂಡ ಪ್ರಕಟ

ಬೆಂಗಳೂರು,ನ.17-ಹಾಕಿ ವಿಶ್ವ ಲೀಗ್ ಫೈನಲ್ ಗೆ ಭಾರತ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ತಂಡದಲ್ಲಿ ಸ್ಥಾನ ಗಳಿಸಲು ಮಾಜಿ ನಾಯಕ, ಪ್ರಮುಖ ಆಟಗಾರ ಸರ್ದಾರ್ ಸಿಂಗ್ ವಿಫಲರಾಗಿದ್ದಾರೆ.

ಪೆನಾಲ್ಟಿ ಕಾರ್ನರ್ ತಜ್ಞ ಹಾಗೂ ಡಿಫೆಂಡರ್ ರುಪಿಂದರ್ ಪಾಲ್ ಸಿಂಗ್, ಮಿಡ್ ಫೀಲ್ಡರ್ ಬಿರೇಂದ್ರ ಲಾಕ್ರಾ ಅವರನ್ನು ತಂಡಕ್ಕೆ ಮತ್ತೆ ಕರೆಸಿಕೊಳ್ಳಲಾಗಿದೆ. ಕಳೆದ ತಿಂಗಳು ಢಾಕಾದಲ್ಲಿ ನಡೆದ ಏಷ್ಯಾ ಕಪ್ ನಲ್ಲಿ ಆಡಿದ ತಂಡದಲ್ಲಿದ್ದ ಸರ್ದಾರ್(31) ಅವರು ಉತ್ತಮ ಡಿಫೆಂಡರ್ ಆಗಿ ಪ್ರದರ್ಶನ ನೀಡಿದ್ದರು. ಆದರೆ ಹಾಕಿ ಇಂಡಿಯಾದ ಆಯ್ಕೆದಾರರ ಮನವೊಲಿಸುವಲ್ಲಿ ವಿಫಲರಾಗಿದ್ದಾರೆ.

ಮನ್ ಪ್ರೀತ್ ಅವರು ತಂಡದ ನಾಯಕರಾಗಿ ಮುಂದುವರೆಯಲಿದ್ದು, ಚಿಂಗ್ಲೆಸನಾ ಸಿಂಗ್ ಅವರು ಉಪ ನಾಯಕರಾಗಿದ್ದಾರೆ. ಡಿ.1ರಂದು ಆಸ್ಟ್ರೇಲಿಯಾ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನಾಡಲಿದೆ.

ಭಾರತ ತಂಡ: ಆಕಾಶ್ ಅನಿಲ್ ಚಿಕ್ಟೆ, ಸೂರಜ್, ಕರ್ಕೆರಾ (ಗೋಲ್ ಕೀಪರ್ಸ್), ಹರ್ಮನ್ ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ದಿಪ್ಸನ್ ಟಿರ್ಕಿ, ವರುಣ್ ಕುಮಾರ್, ರುಪೀಂದರ್ ಸಿಂಗ್, ಬಿರೇಂದ್ರ ಲಾಕ್ರಾ (ಡಿಫೆಂಡರ್ಸ್), ಮನ್ ಪ್ರೀತ್ ಸಿಂಗ್ (ನಾಯಕ), ಚಿಂಗ್ಲೆನ್ಸಾನಾ ಸಿಂಗ್ (ಉಪ ನಾಯಕ), ಎಸ್ ಕೆ ಉತ್ತಪ್ಪ, ಸುಮಿತ್, ಕೊತಾಜಿತ್ ಸಿಂಗ್ (ಮಿಡ್ ಫೀಲ್ಡರ್ಸ್), ಎಸ್ ವಿ ಸುನಿಲ್, ಆಕಾಶ್ ದೀಪ್ ಸಿಂಗ್, ಮನ್ ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ್, ಗುರ್ಜಂತ್ ಸಿಂಗ್ (ಮುಂಪಡೆ) ಯಲ್ಲಿ ಆಡಲಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: