ಕರ್ನಾಟಕ

ಇಂಟಿಲಿಜೆನ್ಸ್ ಮಾಹಿತಿ ಗ್ರಾಮಾಂತರದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಗೆಲ್ಲುತ್ತದೆಂದು ಹೇಳಿದೆ : ಆರ್. ರಾಮಕೃಷ್ಣ

ರಾಜ್ಯ(ತುಮಕೂರು)ನ.17:-ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಒಟ್ಟು 165 ಭರವಸೆಗಳ ಪೈಕಿ ಈಗಾಗಲೇ 155ನ್ನು ಈಡೇರಿಸಿದ್ದು, ಕೆಲವೇ ಕೆಲವು ಮಾತ್ರ ಬಾಕಿ ಉಳಿದಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಸಹ ಸಂಪೂರ್ಣವಾಗಿ ಈಡೇರಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ಹೇಳಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ತುಮಕೂರು ಗ್ರಾಮಾಂತರ ಕ್ಷೇತ್ರದ ಸರ್ಕಾರದ ನಾಮಿನಿ ಸದಸ್ಯರುಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರೈತರ ಸಾಲ ಮನ್ನಾ, ಇಂದಿರಾ ಕ್ಯಾಂಟಿನ್, ನೇಕಾರರ ಸಾಲ ಮನ್ನಾ ಇವುಗಳು ಪ್ರಣಾಳಿಕೆಯಲ್ಲಿ ಇಲ್ಲದಿದ್ದರೂ ಸಹ ಅವುಗಳನ್ನು ಈಡೇರಿಸಿದ್ದಾರೆ. ಇಂಟಿಲಿಜೆನ್ಸ್ ಮಾಹಿತಿ ಗ್ರಾಮಾಂತರದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಗೆಲ್ಲುತ್ತದೆಂದು ಹೇಳಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷ ನೀಡಿರುವ ಮನೆ ಮನೆ ಕಾಂಗ್ರೆಸ್ ಪುಸ್ತಕವನ್ನು ಪ್ರತಿಯೊಂದು ಮನೆ ಮನೆಗೆ ಕೊಟ್ಟು, ಕಾಂಗ್ರೆಸ್ ಪಕ್ಷದ ಸಾಧನೆಗಳ ಬಗ್ಗೆ ಮತದಾರರ ಬಳಿ ಮನಬಿಚ್ಚಿ ಮಾತನಾಡಬೇಕು ಎಂದು ಹೇಳಿದರು.

ಸಭೆಯಲ್ಲಿ ಬಯಲು ಸೀಮೆ ಅಧ್ಯಕ್ಷ ಕಲ್ಲಹಳ್ಳಿ ದೇವರಾಜು, ಕಾಂಗ್ರೆಸ್ ಮುಖಂಡರಾದ ಗಿರಿಯಣ್ಣ, ಎಪಿಎಂಸಿ ಅಧ್ಯಕ್ಷ ಗಂಗಾಧರಯ್ಯ, ಮಾಜಿ ಅಧ್ಯಕ್ಷ ಎಂ. ಕೆಂಪಣ್ಣ, ಗ್ರಾಮಾಂತರ ಅಧ್ಯಕ್ಷ ಜಿ.ಡಿ. ವಿಜಯಕುಮಾರ್, ಮತ್ತಿತರರು ಉಪಸ್ಥಿತರಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: