ಮೈಸೂರು

ನ.18-19ರಂದು ರಾಜ್ಯಮಟ್ಟದ ಕಿವುಡರ ಚದುರಂಗ ಪಂದ್ಯಾವಳಿ

ಮೈಸೂರು, ನ. 17 : 14ನೇ ಕರ್ನಾಟಕ ರಾಜ್ಯ ಮಟ್ಟದ ಕಿವುಡರ ಚದುರಂಗ ಪಂದ್ಯಾವಳಿಯನ್ನು ನ.18 ಮತ್ತು 19ರಂದು, ಇಂಟರ್ ನ್ಯಾಷನಲ್ ಯೂತ್ ಹಾಸ್ಟಲ್ ನಲ್ಲಿ ಆಯೋಜಿಸಿದೆ ಎಂದು ಜೆಎಸ್ಎಸ್ ವಾಕ್ ಮತ್ತು ಶ್ರವಣ ಸಂಸ್ಥೆಯ ಸಂಜ್ಞೆ ಭಾಷಕಿ ಕಂಚನ್ ಎಸ್. ವರ್ಮ ತಿಳಿಸಿದರು.

ಬೆಂಗಳೂರಿನ ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟ, ಮೈಸೂರು ಜಿಲ್ಲಾ ಕಿವುಡರ ಸಂಘ ಸಂಯುಕ್ತವಾಗಿ ಆಯೋಜಿಸಿರುವ ಪಂದ್ಯಾವಳಿಗಳು ಅಂದು ಬೆಳಗ್ಗೆ 9.30ಕ್ಕೆ ಆರಂಭವಾಗಲಿವೆ, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಎ.ರಾಮದಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ನಿರ್ದೇಶಕಿ ರಾಧಾ ಹಾಜರಿರುವರು, ಅಖಿಲ ಭಾರತ ಕಿವುಡರ ಕ್ರೀಡಾ ಮಂಡಳಿ ಅಧ್ಯಕ್ಷ ಆರ್.ಸಿ.ಸತ್ಯೆನ್, ಕಾರ್ಯದರ್ಶಿ ವಿ.ಕುಮಾರ್ ಭಾಗಿಯಾಗುವರು.

ನ.19ರ ಸಂಜೆ 4 ಗಂಟೆಗೆ ನಡೆಯುವ ಸಮಾರೋಪದಲ್ಲಿ ಸ್ವಚ್ಚ ಭಾರತ್ ಅಭಿಯಾನದ ಮೈಸೂರು ಪ್ರತಿನಿಧಿ ಹೆಚ್.ವಿ.ರಾಜೀವ್, ಉದ್ಯಮಿ ಎಚ್.ವಿ.ಬಸವರಾಜು, ಅಂತರಾಷ್ಟ್ರೀಯ ವಾಲಿಬಾಲ್ ಮಾಜಿ ಆಟಗಾರ ಟಿ.ವಿ.ಮನೋಹರ್, ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ಅಧ್ಯಕ್ಷ ಸುನಿಲ್ ಎಂ. ಕಂದಕೂರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಪಂದ್ಯಾವಳಿಯಲ್ಲಿ ತುಮಕೂರು, ಮಂಡ್ಯ, ಹುಬ್ಬಳ್ಳಿ, ಚಿಕ್ಕಮಗಳೂರು, ಸೇರಿದಂತೆ ಸುಮಾರು 17 ಜಿಲ್ಲೆಗಳ 130ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಳ್ಳುವರು. ಸ್ಪರ್ಧೆಯಲ್ಲಿ ವಿಜೇತರನ್ನು 2018ರ ಫೆಬ್ರವರಿಯಲ್ಲಿ ಜರುಗುವು 19ನೇ ರಾಷ್ಟ್ರೀಯ ಚದುರಂಗ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಎಮ್.ಡಿಡಿಎ ಕಾರ್ಯದರ್ಶಿ ಬಿ.ಆರ್.ಮಧುಸೂದನ್ ರಾವ್, ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ವಿ.ಕುಮಾರ್, ಮೈಸೂರು ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಮಹೇಶ್ ವರ್ಮ, ಖಜಾಂಚಿ ರಂಗನಾಥ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: