ಕರ್ನಾಟಕಮೈಸೂರು

2000 ರು. ನೋಟಿನೊಂದಿಗೆ ಸಂಭ್ರಮಿಸಿದ ಸ್ಟೇಟ್ ಬ್ಯಾಂಕ್ ಗ್ರಾಹಕರು

ಬೈಲಕುಪ್ಪೆ: ಗ್ರಾಮದ ಎಸ್.ಬಿ.ಎಂ. ಶಾಖೆಯಲ್ಲಿ ಟಿಬೆಟನ್ ನಿರಾಶ್ರಿತರು ಬೆಳಗ್ಗೆಯಿಂದ ಸರದಿ ಸಾಲಿನಲ್ಲಿ ನಿಂತು ತಮ್ಮ ಬಳಿಯಿದ್ದ 500 ಮತ್ತು 1000 ರು. ಬೆಲೆಯ ಹಳೆಯ ನೋಟುಗಳನ್ನು ಬ್ಯಾಂಕ್‌ಗೆ ನೀಡಿ, 2000 ರೂ.ಗಳ ನೂತನ ನೋಟುಗಳನ್ನು ಪಡೆದುಕೊಂಡರು.

ಅನೇಕ ಗ್ರಾಹಕರು ತಮ್ಮ ದಿನಬಳಕೆಯ ವಸ್ತುಗಳ ಖರೀದಿ ಮಾಡುವುದಕ್ಕೆ 100 ರೂ.ಗಳ ನೋಟು ಡ್ರಾ ಮಾಡಲು ಪಕ್ಕದಲ್ಲಿರುವ ಎಟಿಎಂ ಮುಂದೆ ಸರದಿ ಸಾಲಿನಲ್ಲಿ ನಿಂತಿರುವುದು ಕಂಡುಬಂದರೆ, ಬ್ಯಾಂಕಿನ ವ್ಯವಸ್ಥಾಪಕರೊಂದಿಗೆ ಬೈಲಕುಪ್ಪೆಯ ಟಿಬೆಟನ್ ಅಗ್ರಿಕಲ್ಚರಲ್ ಸೊಸೈಟಿಯ ಪದಾಧಿಕಾರಿಗಳು ಹೊಸ ನೋಟುಗಳನ್ನು ತಮ್ಮ ಕೈಯಲ್ಲಿ ಹಿಡಿದು ಕ್ಯಾಮರಾಗೆ ಪೋಸು ನೀಡಿದರು. ಇನ್ನು ಕೆಲವರು ಹೊಸ ನೋಟಿನೊಡನೆ ತಮ್ಮ ಸೆಲ್ಫೀ ತೆಯುವುದರಲ್ಲಿ ಬಿಜಿ಼ಯಾಗಿದ್ದರು.

ಫೊಟೊ ವಿವರ: 2000 ರು. ಮುಖಬೆಲೆಯ ನೂತನ ನೋಟುಗಳನ್ನು ಹಿಡಿದು ಬೈಲಕುಪ್ಪೆಯ ಎಸ್.ಬಿ.ಎಂ. ಶಾಖೆಯ ವ್ಯವಾಸ್ಥಪಕರೊಂದಿಗೆ ಟಿಬೆಟನ್ ನಿರಾಶ್ರಿತರು ಪೋಸು ನೀಡಿದ್ದು ಹೀಗೆ.

Leave a Reply

comments

Related Articles

error: