ಮನರಂಜನೆ

ಬಾಲಿವುಡ್ ನ ರೋಮ್ಯಾಂಟಿಕ್ ಬಾದ್ ಶಾ ಶಾರೂಖ್ ಖಾನ್ ಧನ್ಯವಾದ ಹೇಳಿದ್ಯಾಕೆ?

ದೇಶ(ಮುಂಬೈ)ನ.18:- ಬಾಲಿವುಡ್ ನ ರೋಮ್ಯಾಂಟಿಕ್ ಬಾದ್ ಶಾ ಶಾರೂಖ್ ಖಾನ್ ತನ್ನ 25 ವರ್ಷಗಳ ಚಿತ್ರರಂಗದ ವೃತ್ತಿ ಜೀವನದಲ್ಲಿ ನೀಡಿದ ಚಿತ್ರಗಳಲ್ಲಿ ಕೆಲವನ್ನು ಮರೆಯುವುದಕ್ಕೇ ಸಾಧ್ಯವಿಲ್ಲ. ಅವರೂ ಕೂಡ ಹಳೆಯ ಚಿತ್ರಗಳೊಂದಿಗೆ ನಟಿಯರನ್ನೂ ಮೆಲುಕು ಹಾಕಿದ್ದಾರಂತೆ.

2ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗವನ್ನಾಳುತ್ತಿರುವ ಶಾರೂಖ್ ದೇಶದಲ್ಲಷ್ಟೇ ಅಲ್ಲದೇ  ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದ್ದಾರೆ. 1992ರ ದಿವಾನಾ ಚಿತ್ರದಿಂದ ವೃತ್ತಿ ಜೀವನ ಆರಂಭಿಸಿದ ಶಾರೂಖ್  ಇದುವರೆಗೆ 80ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಗಳಲ್ಲಿ ಶಾರೂಖ್ ಖಾನ್ ಬಿ.ಟೌನ್ ನ ನಟಿಯರೊಂದಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಕಿಂಗ್ ಖಾನ್ ಲೀಡಿಂಗ್ ನಟಿಯರಿಗೆ ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. ಆಲಿಯಾಭಟ್ಟ, ಮಾಧುರಿ ದೀಕ್ಷಿತ್, ಮತ್ತು ಕರೀನಾ ಕಪೂರ್ ಜೊತೆಗಿರುವ ಮೂರು ಭಾವಚಿತ್ರಗಳನ್ನು ಶೇರ್ ಮಾಡಿ ಈ ಮೂವರು ಮಹಿಳೆಯರಿಗೆ ನನ್ನ ಧನ್ಯವಾದ, ಇವರು ನನ್ನನ್ನು ಅತ್ಯುತ್ತಮ ಮನುಷ್ಯನನ್ನಾಗಿ ಮಾಡಿದರು. ಯಾವಾಗಲೂ ಇದೇ ರೀತಿ ಸೌಮ್ಯವಾಗಿರಿ ಎಂದು ಬರೆದಿದ್ದಾರೆ. (ಎಸ್.ಎಚ್)

 

Leave a Reply

comments

Related Articles

error: