ಕರ್ನಾಟಕಮೈಸೂರು

ಕವಿ ದೊಡ್ಡರಂಗೇಗೌಡರ ಜೀವನ ಆಧಾರಿತ ‘ಹಳ್ಳಿಹೈದ’ ಅಭಿನಂದನಾ ಗ್ರಂಥ ಲೋಕಾರ್ಪಣೆ

ಮೈಸೂರು: ಜನಚೇತನ ಟ್ರಸ್ಟ್, ಮೈಸೂರು ಜಿಲ್ಲಾ ಕಸಾಪ ಹಾಗೂ ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ, ಡಾ. ದೊಡ್ಡರಂಗೇಗೌಡ ರಚಿತ ಕಾವ್ಯ-ಗೀತೋತ್ಸವ ಹಾಗೂ ಅಭಿನಂದನಾ ಸಮಾರಂಭವನ್ನು ಕಲಾಮಂದಿರದಲ್ಲಿ ಆಯೋಜಿಸಲಾಗಿತ್ತು.

ಡಾ.ದೊಡ್ಡರಂಗೇಗೌಡರ ಜೀವನ ಆಧಾರಿತ ಹಾಗೂ ಅವರಿಗೆ 70 ವರ್ಷ ತುಂಬಿದ ಹಿನ್ನಲೆಯಲ್ಲಿ ಹಳ್ಳಿಹೈದ ಅಭಿನಂದನಾ ಗ್ರಂಥವನ್ನು ಕಲಾಮಂದಿರದಲ್ಲಿ ಗಣ್ಯರ‌ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಇದಕ್ಕೂ ಮುನ್ನ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ಕವಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಹೆಬ್ರಿ ಅವರು, ದೊಡ್ಡರಂಗೇಗೌಡ ಅವರ ಕವಿತೆಗಳು ನಮ್ಮ ಮನ ತಣಿಸುತ್ತವೆ. ಬೆಳಗಿರದ ಬಾನಿನಲ್ಲಿ ಬೆಳಕಾಗಿ ರವಿ ಬೆಳಗಿದ ನೋಡಿ ಎಂಬ ಸಾಲುಗಳನ್ನ ಹೇಳುವ ಮೂಲಕ ಹಿರಿಯ ಕವಿಗಳಿಗೆ ನಮನ ಸಲ್ಲಿಸಿದರು. ನಾನೂ ಇಂತಹ ಕವಿಗಳ ಪಕ್ಕದಲ್ಲಿ ಕುತಿರುವುದು ನನ್ನ ಸೌಭಾಗ್ಯ ಎಂದರು. ಇವತ್ತಿನ ಚಿತ್ರಗೀತೆಗಳ ಅಬ್ಬರಕ್ಕೆ ಸುಮಧುರ ಗೀತೆಗಳ ಬರಕ್ಕೆ ನಾನೂ ಏನೂ ಹೇಳಬೇಕು ಗೊತ್ತಾಗುತ್ತಿಲ್ಲ. ನಮ್ಮ ಸಚಿವರು ವಾಟ್ಸ್ ಅಪ್ ನಲ್ಲಿ ನೋಡಿದ ಚಿತ್ರಗಳಿಗೆ ಉತ್ತರವಾಗಿ ನಮ್ಮವರು ದೊಡ್ಡರಂಗೇಗೌಡರು ರಚಿಸಿದ ಚಾಟಿ ಬೀಸುವಂತ ಗೀತೆಗಳನ್ನ ರಾಜಕಾರಣಿಗಳ ಫೇಸ್ ಬುಕ್ ಖಾತೆಗೆ ಪೋಸ್ಟ್ ಮಾಡಬೇಕೆಂದು ಮಾತಿನಲ್ಲೇ ಚಾಟಿ ಬೀಸಿದರು.

ಡಾ. ದೊಡ್ಡರಂಗೇಗೌಡರು ಮಾತನಾಡಿ, ನಾನು ವಿಜ್ಞಾನಿಯಾಗಬೇಕೆಂದು ನಮ್ಮ ತಂದೆಯ ಕನಸಾಗಿತ್ತು. ಆದರೆ ನಾನು ಸಮಾಜದ ವಿಜ್ಞಾನಿಯಾಗಬೇಕೆಂದು ನನ್ನ ಆಸೆಯಾಗಿತ್ತು. ಸಮಾಜದ ಸಮಸ್ಯೆ ತಿದ್ದುವ ಸಲುವಾಗಿ ಕೈಗೆ ಲೇಖನಿ ಬಂತು. ನಮ್ಮ ತಂದೆ ರಾಗವಾಗಿ ಹಾಡು ಹೇಳುತ್ತಾ ಆ ಬಗ್ಗೆ ಮಾಹಿತಿ ನೀಡುತ್ತಿದ್ದರು. ಪರೋಕ್ಷವಾಗಿ ನನ್ನ ತಂದೆಯೇ ನನಗೆ ಸಂಸ್ಕೃತಿಯ ರೂವಾರಿಯಾಗಿದ್ದರು. ಸಂಗೀತದ ಮೇಲಿನ ತುಡಿತವೇ ನನಗೆ ಇಷ್ಟು ದೂರ ಬರುವಂತೆ ಮಾಡಿದೆ ಎಂದು ತಂದೆಯನ್ನು ನೆನೆಯುವ ಮೂಲಕ ಹಳ್ಳಿಯ ಜಾನಪದ ಗೀತೆಗಳನ್ನ ಮೆಲಕು ಹಾಕಿದರು. ನೀವು ನನಗೆ ಹುಚ್ಚ ಎನ್ನಿ, ಕನ್ನಡದ ಕಿಂಕರ ಎನ್ನಿ..  ಕುವೆಂಪು ಅವರನ್ನ ನೋಡಲು ಮೈಸೂರಿಗೆ ಬಂದಿದ್ದೆ. ಅವರ ಹಾದಿಯಲ್ಲೇ ನಡೆಯುತ್ತೇನೆ ಎಂದು ಪಣ ತೊಟ್ಟಿದ್ದೆ ಎಂದು ಭಾವುಕರಾದರು.

ಜಾಣತನಕ್ಕೆ ಒಂದು ಉದಾಹರಣೆ ಮೋದಿಯವರ ಕಾರ್ಯ ಎಂದು ಮೋದಿಯವರ ಜಾಣತನಕ್ಕೆ ಹೊಗಳಿಕೆ ನೀಡಿದರು. ನನಗೆ ಎಲ್ಲವೂ ಬೇಕು. ಆದರೆ ಮಾತೃದ್ರೋಹ ಮಾತ್ರ ಬೇಡ ಎಂದರು ನೋವಿನ ಮೂಲಕ ಜೆ.ಎನ್.ಯು.ವಿನಲ್ಲಿ ಘೋಷಣೆ ಕೂಗಿದ ಪ್ರಕರಣಕ್ಕೆ ಬೇಸರ ವ್ಯಕ್ತಪಡಿಸಿದರು. ನನಗೆ ದೇಶ-ವಿದೇಶದಲ್ಲಿ ನಡೆದ ಸನ್ಮಾನಕ್ಕಿಂತ ಇಂದು ಮೈಸೂರಿನಲ್ಲಿ ನಡೆದ ಸನ್ಮಾನ ಅವಿಸ್ಮರಣಿಯ ಎಂದರು. ಇದೇ ವೇಳೆ ಸರ್ಕಾರದ ಸ್ಟೀಲ್-ಬ್ರಿಡ್ಜ್ ಬಗ್ಗೆ ಬೇಸರ ವ್ಯಕ್ತಪಡಿಸಿ, ಮರ ಬೆಳೆಸಬೇಕೆಂದು ಜನರಿಗೆ ಮನವಿ ಮಾಡಿದರು.

ಜಿಲ್ಲಾ ಕ.ಸಾ.ಪ ಅಧ್ಯಕ್ಷ ವೈ.ಡಿ.ರಾಜಣ್ಣ, ಜನಚೇತನ ಸಂಸ್ಥೆಯ ಅಧ್ಯಕ್ಷ ಪ್ರಸನ್ನ.ಎನ್.ಗೌಡ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ಕವಿ  ಡಾ. ಪ್ರದೀಪ್ ಕುಮಾರ್ ಹೆಬ್ರಿ, ವಿಮರ್ಶಕರಾದ ಡಾ.ಸಿ.ನಾಗಣ್ಣ, ಹೈಳಿ ಹೈದ ಗ್ರಂಥದ ಸಂಪಾದಕಿ ಶ್ರೀಮತಿ ಚಂಪಾವತಿ ಶಿವಣ್ಣ, ಸಿಪಿಕೆ ಸೇರಿದಂತೆ ನೂರಾರು ಸಂಖ್ಯೆಯ ಗೀತಾಸಕ್ತರು ಹಾಜರಿದರು.

ದೊಡ್ಡ ರಂಗೇಗೌಡರು ರಚಿಸಿದ ಗೀತೆಗಳನ್ನ ಖ್ಯಾತ ಸುಗಮ ಸಂಗೀತ ಗಾಯಕಿ ಸುಪ್ರಿಯಾ ರಘುನಂದನ್ ಹಾಗೂ ತಂಡದವರು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತಂದರು.

Leave a Reply

comments

Related Articles

error: