ಕರ್ನಾಟಕಮೈಸೂರು

ಕೈದಿ ಮುಸ್ತಫಾ ಕೊಲೆ: ಜೈಲು ಸಿಬ್ಬಂದಿ ಅಮಾನತು

ಮೈಸೂರು: ಮಂಗಳೂರು ಮೂಲದ ಕೈದಿ ಮುಸ್ತಫಾ ಎಂಬುವರ ಕೊಲೆಯಾದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಜೈಲು ಮಹಿಳಾ ಸಿಬ್ಬಂದಿ ವಸಂತ ಅವರನ್ನು ಅಮಾನತು ಪಡಿಸಿ ಆದೇಶ ಹೊರಡಿಸಲಾಗಿದೆ.

ವಸಂತ ಅವರಿಗೆ ಭದ್ರೆತೆಯ ಜವಬ್ದಾರಿ ನೀಡಲಾಗಿತ್ತು. ನಿನ್ನೆಯ ಕೊಲೆ ಘಟನೆಗೆ ವಸಂತ ಅವರ ನಿರ್ಲಕ್ಷ್ಯವೂ ಒಂದು ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದ ಕಾರಣ ಅವರನ್ನು ಮೈಸೂರು ಕಾರಾಗೃಹ ಅಧೀಕ್ಷಕ ಆನಂದರೆಡ್ಡಿ ಯವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕಳೆದ 6 ತಿಂಗಳಿಂದ ಮೈಸೂರು ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯಾಗಿ ಸೆರೆವಾಸ ಅನುಭವಿಸುತ್ತಿದ್ದ ಮುಸ್ತಫಾ ಅವರು ಸಹಕೈದಿಯಿಂದ ಹಲ್ಲೆಗೊಳಗಾಗಿ ಹತ್ಯೆಗೀಡಾಗಿದ್ದರು.

Leave a Reply

comments

Related Articles

error: