ಪ್ರಮುಖ ಸುದ್ದಿಮೈಸೂರು

2000 ಮುಖಬೆಲೆಯ ಖೋಟಾ ನೋಟು ಪತ್ತೆ

ಮೈಸೂರು, ನ.19:-  ಮೈಸೂರಿನಲ್ಲಿ 2000 ಮುಖಬೆಲೆಯ ಖೋಟಾ ನೋಟು ಪತ್ತೆಯಾಗಿದೆ.

ಅಸಲಿ ನೋಟಿನಂತೆ ಭಾಸವಾಗುವ ನಕಲಿ ನೋಟು ಪತ್ತೆಯಾಗಿದೆ. ತೆಳುವಾದ ಕಾಗದದಲ್ಲಿ ನಕಲಿ ನೋಟು ಪ್ರಿಂಟ್‌ ಮಾಡಲಾಗಿದ್ದು, ಮೈಸೂರಿನ ಅಂಗಡಿಯೊಂದಕ್ಕೆ ಗ್ರಾಹಕರೊಬ್ಬರು ನೀಡಿರುವ 2000ರೂ ನಕಲಿ ನೋಟು ರವಿತೇಜ ಎಂಬುವವರ ಅಂಗಡಿಯಲ್ಲಿ ಪತ್ತೆಯಾಗಿದೆ. ಮೈಸೂರಿನ ಕನಕಗಿರಿಯಲ್ಲಿರುವ ಸ್ಟೇಷನರಿ ಅಂಗಡಿಯಲ್ಲಿ ನೋಟು ಪತ್ತೆಯಾಗಿದ್ದು, ತಕ್ಷಣ ಎಚ್ಚೆತ್ತು ನೋಟಿನ ಮೇಲೆ ಫೇಕ್‌ ಎಂದು ರವಿತೇಜ ಬರೆದಿದ್ದಾರೆ. ಮೈಸೂರಿನಲ್ಲಿ ಇದೆ ಮೊದಲ ಬಾರಿಗೆ ಖೋಟಾ ನೋಟು ಪತ್ತೆಯಾಗಿದೆ. ಒಂದೇ ವರ್ಷಕ್ಕೆ ಭಾರತದೊಳಗೆ ಚಾಲ್ತಿಗೆ ಬಂದ ಪಿಂಕ್‌ ಖೋಟಾನೋಟು. 200 ರೂ ಹಾಗೂ 50 ರೂ ಹೊಸ ನೋಟು ಇನ್ನು ಕೈಗೆ ಸಿಕ್ಕಿಲ್ಲ. ಆಗಲೆ ಪಿಂಕ್‌ಗಳು ನಕಲಿಯಾಗಿ ಮಾರ್ಕೆಟ್‌ನಲ್ಲಿ ಚಲಾವಣೆಗೆ ಬಂದಿದ್ದು, ಸಾರ್ವಜನಿಕರಿಗೆ ದಿಗಿಲು ಹುಟ್ಟಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: