
ಪ್ರಮುಖ ಸುದ್ದಿಮೈಸೂರು
ಅಭ್ಯರ್ಥಿಗಳ ಪಟ್ಟಿಯನ್ನು ನವೆಂಬರ್ ಅಂತ್ಯದೊಳಗೆ ಬಿಡುಗಡೆ ಮಾಡಲಾಗುವುದು : ಎಚ್.ಡಿ.ಕುಮಾರಸ್ವಾಮಿ
ಮೈಸೂರು,ನ.20:- 2018ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಗಳ ಪ್ರಮುಖರ ಸಂಚಾರ ಜೋರಾಗಿಯೇ ನಡೆದಿದೆ.
ಚಾಮರಾಜ ಕ್ಷೇತ್ರದ ಜೆಡಿಎಸ್ ನ ನೂತನ ಕಛೇರಿಯನ್ನು ಭಾನುವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕುಮಾರ ಪರ್ವಕ್ಕೆ ಹೋದ ಕಡೆಯೆಲ್ಲ ಜನರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಫೇಸ್ ಬುಕ್ ವಾರ್ ಸರ್ವೇ ಸಾಮಾನ್ಯ.ಅದಕ್ಕೆ ನಾನು ಹೆಚ್ಚು ಮಹತ್ವ ನೀಡುವುದಿಲ್ಲ. ಈಗಾಗಲೇ ಪಕ್ಷದ ವರಿಷ್ಠರು ಟಿಕೆಟ್ ಯಾರಿಗೆ ಕೊಡಬೇಕೆಂದು ತೀರ್ಮಾನ ಮಾಡಿದ್ದಾರೆ.ಅವರ ತೀರ್ಮಾನವೇ ಅಂತಿಮ.ಅಭ್ಯರ್ಥಿಗಳ ಪಟ್ಟಿಯನ್ನು ನವೆಂಬರ್ ಅಂತ್ಯದೊಳಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕುಮಾರ ಪರ್ವ ಯಾತ್ರೆ ಆರಂಭಗೊಂಡಿದ್ದು ಮೈಸೂರಿನ ವಿ ವಿ ಮೊಹಲ್ಲಾ, ಗೋಕುಲಂ, ಹೆಬ್ಬಾಳಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರೋಡ್ ಶೋ ನಡೆಸಿದರು. ಹೆಬ್ಬಾಳ ಮೈದಾನದ ಕುವೆಂಪು ವೃತ್ತದಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. (ಕೆ.ಎಸ್,ಎಸ್.ಎಚ್)