
ಕರ್ನಾಟಕಪ್ರಮುಖ ಸುದ್ದಿ
ಬಿಜೆಪಿ ಸೇರಲಿದ್ದಾರೆ ರೈತ ಮುಖಂಡ ಕೆ.ಎಸ್ ನಂಜುಂಡೇಗೌಡ ?
ರಾಜ್ಯ(ಮಂಡ್ಯ)ನ.20:- ಶ್ರೀರಂಗಪಟ್ಟಣ ರೈತ ಮುಖಂಡ ಕೆ.ಎಸ್ ನಂಜುಂಡೇಗೌಡ ಬಿಜೆಪಿ ಸೇರಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ರೈತ ಮುಖಂಡ ಕೆ.ಎಸ್ ನಂಜುಂಡೇಗೌಡ ಮಂಡ್ಯ ಜಿಲ್ಲೆಯ ಮುಂಚೂಣಿ ರೈತ ನಾಯಕರಾಗಿದ್ದು,ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಜೆಡಿಎಸ್ ಸೇರುವ ಸಲುವಾಗಿ ರೈತ ಸಂಘ ಬಿಟ್ಟಿದ್ದರು.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ರವೀಂದ್ರ ಶ್ರೀಕಂಠಯ್ಯ ಅವರನ್ನು ಭೇಟಿ ಮಾಡಿದ್ದರು. ಆದರೆ ಜೆಡಿಎಸ್ ವರಿಷ್ಠರು ಶ್ರೀರಂಗಪಟ್ಟಣ ಟಿಕೆಟ್ ರವೀಂದ್ರ ಶ್ರೀಕಂಠಯ್ಯ ಅವರಿಗೆ ಎಂಬ ಮೆಸೇಜ್ ರವಾನಿಸಿದ್ದರು. ಇದರಿಂದ ಬಿಜೆಪಿ ಸೇರಲು ನಂಜುಂಡೇಗೌಡ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರ ಜೊತೆಗೌಡರು ಚರ್ಚಿಸಿದ್ದು, ನವೆಂಬರ್ 25ರಂದು ಬೆಂಗಳೂರಲ್ಲಿ ಬಿಜೆಪಿ ಸೇರ್ಪಡೆ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. ಬಿಜೆಪಿ ಸೇರ್ಪಡೆ ಸಂಬಂಧ ಶ್ರೀರಂಗಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಂಬಲಿಗರ ಸಭೆ ನಡೆಸಿದ್ದು,ಶ್ರೀರಂಗಪಟ್ಟಣಕ್ಕೆ ಶಾಸಕ ಸಿಪಿ.ಯೋಗೇಶ್ವರ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ನಂಜುಂಡೇಗೌಡರು ಸರ್ವೋದಯ ಕರ್ನಾಟಕ ಪಕ್ಷದಿಂದ 6 ಬಾರಿ ಸ್ಪರ್ಧಿಸಿ ಕಡಿಮೆ ಅಂತರದಿಂದ ಪರಾಭವಗೊಂಡಿದ್ದರು. (ಕೆ.ಎಸ್,ಎಸ್.ಎಚ್)