ಕರ್ನಾಟಕ

ಕಂಬೈಂಡ್ ಡಿಸೈನ್ಸ್ ಸರ್ವಿಸಸ್ ಪರೀಕ್ಷೆಗೆ ಅರ್ಜಿ ಆಹ್ವಾನ

ಹಾಸನ (ನ.20): ಕೇಂದ್ರ ಲೋಕಸೇವಾ ಆಯೋಗದವರು ಭಾರತದ ರಕ್ಷಣಾ ಇಲಾಖೆಯಲ್ಲಿ 414 ಉನ್ನತ ಅಧಿಕಾರಿಗಳನ್ನು ನೇಮಿಸಲು ಕಂಬೈಂಡ್ ಡಿಸೈನ್ಸ್ ಸರ್ವಿಸಸ್ ಪರೀಕ್ಷೆ-2018ರ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.

ಪರೀಕ್ಷೆಯು ದಿ.04-02-2018ರಂದು ದೇಶದಲ್ಲೆಲ್ಲ ನಡೆಯಲಿದೆ. ಆಸಕ್ತರು ದಿ. 4-12-2017ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಜಾಲತಾಣ: www.upsconline.nic.in

ಆಸಕ್ತರು, ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿ ಹುದ್ದೆಗಳಿಗೆ ಯಾವುದೇ ಪದವಿ, ನಾವೆಲ್ ಅಕಾಡೆಮಿ ಹುದ್ದೆಗಳಿಗೆ ಇಂಜಿನಿಯರಿಂಗ್ ಪದವಿ, ಏರ್‍ಫೋರ್ಸ್ ಅಕಾಡೆಮಿ ಹುದ್ದೆಗಳಿಗೆ ಬೌತಶಾಸ್ತ್ರ ಮತ್ತು ಗಣಿತದೊಂದಿಗೆ ಬಿ.ಎಸ್ಸಿ ಪದವಿ ಅಥವಾ ಇಂಜಿನಿಯರಿಂಗ್ ಪದವಿ ಪಡೆದಿದ್ದು IMA ಹಾಗೂ INAಗೆ ದಿ. 2-1-1995 ರಿಂದ 1-1-2000, AFAಗೆ ದಿ.2-1-1995 ರಿಂದ 1-1-1999 ಹಾಗೂ OTA ಹುದ್ದೆಗಳಿಗೆ ದಿ. 2-1-1994 ರಿಂದ 1-1-2000 ನಡುವೆ ಜನಿಸಿರಬೇಕು. ಅಂತಿಮ ಪದವಿಯಲ್ಲಿ ಓದುತ್ತಿರುವ ಅರ್ಹರು. ಅರ್ಜಿ ಶುಲ್ಕ ರೂ. 200/- ಪ.ಜಾ./ಪ.ಪಂ./ ಮಹಿಳಾ ಅಭ್ಯರ್ಥಿಗಳಿಗೆ ವಿನಾಯಿತಿ ಇದೆ.

ಆಯ್ಕೆಗಾಗಿ ಪತ್ರಿಕೆ-1 ಇಂಗ್ಲೀಷ್-100 ಅಂಕ, ಪತ್ರಿಕೆ-2 ಜನರಲ್ ನಾಲೆಡ್ಜ್ 100 ಅಂಕ, ಪ್ರತಿ ಪತ್ರಿಕೆಗೂ 2 ಗಂಟೆ ಅವಧಿ. IMA/ANA/AFAಗೆ ಸೇರಬಯಸುವವರಿಗೆ ಪತ್ರಿಕೆ-3 ಎಲಿಮೆಂಟರಿ ಮ್ಯಾಥ್ಸ್ 100 ಅಂಕ 2 ಗಂಟೆ ಅವಧಿ ಪರೀಕ್ಷೆಗೆ ಇರುವಷ್ಟೆ ಅಂಕ ಸಂದರ್ಶನಕ್ಕೂ ಇರುತ್ತದೆ. ಪರೀಕ್ಷೆ ಬಹು ವಿಧಾನದಲ್ಲಿರುತ್ತದೆ. ಕರ್ನಾಟಕದಲ್ಲಿ ಬೆಂಗಳೂರು ಹಾಗೂ ಧಾರವಾಡ ಪರೀಕ್ಷಾ ಕೇಂದ್ರಗಳು.

ಸರ್ವೀಸಸ್ ಸೆಲೆಕ್ಷನ್ ಬೋರ್ಡ್ ಸಂದರ್ಶನದಲ್ಲಿ 2 ಹಂತದಲ್ಲಿ ಆಫೀಸರ್ಸ್ ಇಂಟಲಿಜೆನ್ಸ್ ರೇಟಿಂಗ್ ಟೆಸ್ಟ್, ಪಿಚ್ಚರ್‍ಪರ್ಸೆಪ್ಷನ್ ಮತ್ತು ಡಿಸ್ಕ್ರಿಪ್ಷನ್‍ಟೆಸ್ಟ್ 1ನೇ ಹಂತದಲ್ಲಿ ಸಂದರ್ಶನ, ಗ್ರೂಪ್ ಟೆಸ್ಟಿಂಗ್, ಆಫೀಸರ್ ಟಾಸ್ಕ್, ಸೈಕಾಲಜಿ ಟೆಸ್ಟ್ ಮತ್ತು ಕಾನ್ಫರೆನ್ಸ್ ಇರುತ್ತದೆ. ಈ ಸಂದರ್ಶನ 4 ದಿನಗಳು ನಡೆಯಬಹುದು.

ಅರ್ಹ ಆಸಕ್ತ ಹಾಸನ ಜಿಲ್ಲೆಯ ಎಲ್ಲ ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡಿಸಿಕೊಳ್ಳಲು ಕೃಷಿಕ್‍ಸರ್ವೋದಯ ಫೌಂಡೇಶನ್ ವತಿಯಿಂದ ಉಚಿತ ವಸತಿ ಸಹಿತ ತರಬೇತಿಯನ್ನು ರಿಯಾಯಿತಿ ದರದಲಿ ನೀಡಲಾಗುವುದು. ಅರ್ಜಿ ಸಲ್ಲಿಸುವುದು ಹೇಗೆ, ಸಿದ್ದತೆ ಯಾವ ರೀತಿ ಮಾಡಿಕೊಳ್ಳಬೇಕು, ಯಾವ ಯಾವ ಪುಸ್ತಕಗಳನ್ನು ಓದಬೇಕು ಎಂಬಿತ್ಯಾದಿ ವಿವರಕ್ಕಾಗಿ, ಮಾಹಿತಿ, ಮಾರ್ಗದರ್ಶನ, ಸಲಹೆ ಮತ್ತು ತರಬೇತಿಗಾಗಿ ಕೃ.ಸ.ಫೌ. ಅನ್ನು ಖುದ್ದಾಗಿ ಅಥವಾ ಚರವಾಣಿ 984549336 ಮೂಲಕ ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ.

(ಎನ್‍ಬಿಎನ್‍)

Leave a Reply

comments

Related Articles

error: