ಕರ್ನಾಟಕಪ್ರಮುಖ ಸುದ್ದಿ

ಭೂದೃಶ್ಯ ತೋಟಗಾರಿಕೆ ಅಭಿವೃದ್ಧಿ ಮತ್ತು ನಿರ್ವಹಣೆ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು (ನ.20): 2017-18 ನೇ ಸಾಲಿನಲ್ಲಿ ಡಿಸೆಂಬರ್ 4 ರಿಂದ 28 ರ ವರೆಗೆ ತೋಟಗಾರಿಕೆ ತರಬೇತಿ ಕೇಂದ್ರ, ಲಾಲ್‍ಬಾಗ್, ಬೆಂಗಳೂರು ಇಲ್ಲಿ ನಡೆಯುವ 20 ದಿನಗಳ ಅವಧಿಯ ಭೂದೃಶ್ಯ ತೋಟಗಾರಿಕೆ ಅಭಿವೃದ್ಧಿ ಮತ್ತು ನಿರ್ವಹಣೆ ತರಬೇತಿಗೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತರಬೇತಿಗೆ ಆಯ್ಕೆಯಾಗಲು ಕನಿಷ್ಠ 5 ನೇ ತರಗತಿ ತೇರ್ಗಡೆಯಾಗಿರಬೇಕು. ಕನ್ನಡ ಓದುವುದು, ಬರೆಯುವುದು ಮತ್ತು ಮಾತನಾಡುವುದು ತಿಳಿದಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮತ್ತು ಇತರರಿಗೆ ಕನಿಷ್ಠ 18 ವರ್ಷ ಗರಿಷ್ಠ 33 ವರ್ಷ.

ಕೌಶಲ್ಯ ಅಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ರವರ ಅಧಿಕೃತ ವೆಬ್‍ಸೈಟ್ ನಲ್ಲಿ ತೋಟಗಾರಿಕೆ ತರಬೇತಿಗಾಗಿ ದಾಖಲಿಸಿರುವ ಅಭ್ಯರ್ಥಿಗಳಿಗೆ ಮತ್ತು ರೈತ ಮಕ್ಕಳಿಗೆ ಆದ್ಯತೆ ನೀಡಲಾಗುವುದು.

ಜೇಷ್ಠತೆ ಆಧಾರದ ಮೇಲೆ ಅಭ್ಯರ್ಥಿಗಳಿಗೆ ತರಬೇತಿಗೆ ಅವಕಾಶ ನೀಡಲಾಗುವುದು. ಅರ್ಜಿಗಳನ್ನು ಸಹಾಯಕ ತೋಟಗಾರಿಕೆ ನಿರ್ದೇಶಕರು, ತರಬೇತಿ ಕೇಂದ್ರ, ಲಾಲ್‍ಬಾಗ್, ಬೆಂಗಳೂರು ಅಥವಾ ಇಲಾಖೆ ವೆಬ್‍ಸೈಟ್ www.horticulture.kar.nic.inಅಲ್ಲಿ ನವೆಂಬರ್ 28 ರವರೆಗೆ ಪಡೆಯಬಹುದಾಗಿರುತ್ತದೆ.

ನವೆಂಬರ್ 30 ರಂದು ಅಭ್ಯರ್ಥಿಗಳ ಅರ್ಜಿಗಳ ಪರಿಶೀಲನೆ ಮತ್ತು ಆಯ್ಕೆಪಟ್ಟಿಯನ್ನು ಪ್ರಕಟಿಯನ್ನು ಪ್ರಕಟಿಸಲಾಗುವುದು. ಭರ್ತಿಮಾಡಿದ ಅರ್ಜಿಗಳನ್ನು ಸಂಬಂಧಿಸಿದ ದಾಖಲಾತಿಗಳೊಂದಿಗೆ ನವೆಂಬರ್ 28 ರಂದು ಸಂಜೆ 5.30 ಗಂಟೆಯೊಳಗೆ ಸಹಾಯಕ ತೋಟಗಾರಿಕೆ ನಿರ್ದೇಶಕರು, ತರಬೇತಿ ಕೇಂದ್ರ, ಲಾಲ್‍ಬಾಗ್, ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9071280906 ಮತ್ತು 080-26564538 ಗಳನ್ನು ಸಂಪರ್ಕಿಸಬಹುದಾಗಿದೆ.

(ಎನ್‍ಬಿಎನ್‍)

Leave a Reply

comments

Related Articles

error: