ಮೈಸೂರು

ಬ್ರಾಹ್ಮಣ ಸಮುದಾಯ ಸಂಘಟನಾತ್ಮಕವಾಗಿ ಬಲಿಷ್ಠವಾಗಬೇಕು: ಡಾ. ಭಾನುಪ್ರಕಾಶ್

ಬ್ರಾಹ್ಮಣ ಸಮುದಾಯ ಸಂಘಟನಾತ್ಮಕವಾಗಿ ಬಲಿಷ್ಠವಾಗಬೇಕಿದೆ ಎಂದು ವೇದಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮ ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಡಿಸೆಂಬರ್ 11 ಮತ್ತು 12ರಂದು ಎರಡು ದಿನಗಳ ಕಾಲ ಬೆಳಗಾಂನ ಗಾಯತ್ರಿ ಸಭಾಭವನದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ 9ನೇ ಮಹಾ ಸಮ್ಮೇಳನದ ಪ್ರಯುಕ್ತ ಮೈಸೂರಿನ ಕೋಟೆ ಆಂಜನೇಯ ದೇವಳದ ಮುಂಭಾಗ ಮೈಸೂರು ಜಿಲ್ಲಾ ವತಿಯಿಂದ ಸಮಾವೇಶದ ಪ್ರಚಾರ ಸಮಿತಿಯನ್ನು ಉದ್ಘಾಟಿಸಿ ಪ್ರಚಾರ ಸಾಮಗ್ರಿಗಳಾದ ಭಿತ್ತಿಪತ್ರ ಬಿಡುಗಡೆಯನ್ನು ಡಾ.ಭಾನುಪ್ರಕಾಶ್ ಶರ್ಮ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಭವಿಷ್ಯದ ಪರಿಕಲ್ಪನೆಯಿಂದ ರಾಜ್ಯಮಟ್ಟದ ಬ್ರಾಹ್ಮಣ ಮಹಾಸಮ್ಮೇಳನ ಸಜ್ಜಾಗಲಿದೆ ಎಂದರು. ಸಾರಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಮಾವೇಶದ ಮೂಲಕ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಮೈಸೂರು ಜಿಲ್ಲಾ ನಗರ ಬ್ರಾಹ್ಮಣ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ, ಆರೋಗ್ಯವಿಮೆ, ಉದ್ಯೋಗಮೇಳ ನಡೆಸಲಾಗುವುದು ಎಂದು ತಿಳಿಸಿದರು.

ಮಾಜಿ ಮುಡಾ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ ಮಾತನಾಡಿ ಶಿಕ್ಷಣ,ಆರೋಗ್ಯ, ಉದ್ಯೋಗದ ಕ್ಷೇತ್ರದಲ್ಲಿ ನಮ್ಮ ಬ್ರಾಹ್ಮಣ ಸಮುದಾಯ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಸರ್ಕಾರಿ ಸವಲತ್ತುಗಳ ಅವಶ್ಯಕತೆಯಿದೆ. ಬ್ರಾಹ್ಮಣರು ಸಂಘಟಿತರಾಗಿ ಹೊರ ಹೊಮ್ಮಿದರೆ ಮುಂದಿನ ನಮ್ಮ ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಉಪಯೋಗವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಕಾರ್ಯದರ್ಶಿ ಹೆಚ್.ವಿ.ರಾಜೀವ್, ಜಿಲ್ಲಾಬ್ರಾಹ್ಮಣರ ಸಂಘದ ಅಧ್ಯಕ್ಷ ಡಿಟಿಪ್ರಕಾಶ್, ನಗರಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: