ಪ್ರಮುಖ ಸುದ್ದಿಮೈಸೂರು

ತೆರಿಗೆ ಪಾವತಿಗೆ ಒಂದು ತಿಂಗಳ ಗಡುವು ನೀಡಿ: ಮೇಯರ್

500, 1000 ರು. ನೋಟುಗಳನ್ನು ನಿಷೇಧಿಸಿರುವ ಕೇಂದ್ರ ಸರಕಾರ, ತೆರಿಗೆ ಪಾವತಿಗೆ ಒಂದು ತಿಂಗಳು ಗಡುವು ನೀಡಬೇಕು ಎಂದು ಮೇಯರ್ ಬಿ.ಎಲ್. ಭೈರಪ್ಪ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆಯ ವಿವಿಧ ಕಂದಾಯ ಹಾಗೂ ತೆರಿಗೆ ಪಾವತಿಸಿಕೊಳ್ಳಲು ಒಂದು ತಿಂಗಳು ಗಡುವು ವಿಸ್ತರಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದರು.

ತೆರಿಗೆಯ ಬಡ್ಡಿಯನ್ನು ಹೊರತುಪಡಿಸಿ ಈಗಾಗಲೇ ಪ್ರಸಕ್ತ ಸಾಲಿನ ತೆರಿಗೆ ನೀಡುವಂತೆ ಕೈಗೊಂಡ ತೀರ್ಮಾನದಂತೆ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಕೇಂದ್ರ ಸರಕಾರ ಜಾರಿಗೆ ತಂದು ನೂತನ ನೀತಿಯಿಂದ ಎರಡು ದಿನಗಳಿಂದ ಯಾರೊಬ್ಬರೂ ತೆರಿಗೆ ಕಟ್ಟಿಲ್ಲ. 110 ಕೋಟಿ ತೆರಿಗೆ ವಸೂಲಿ ಮಾಡಬೇಕಿದ್ದು, ಸರಕಾರ ನಗರ ಪಾಲಿಕೆಗೆ ವಿನಾಯಿತಿ ನೀಡಿದರೆ ಜನರ ಪರದಾಟ ತಪ್ಪಲಿದ್ದು, ಪಾಲಿಕೆ ಕೆಲಸವೂ ಸುಲಭವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಹಳೆಯ ನೋಟ್ ಪಾವತಿಸಿಕೊಂಡು ಪಾಲಿಕೆ ವಿವಿಧ ರೂಪದ ಕಂದಾಯ ಪಾವತಿಗೆ ಶುಕ್ರವಾರ ಮಾತ್ರ ಅವಕಾಶ ನೀಡಲಾಗಿತ್ತು. ಇದನ್ನು ವಿಸ್ತರಿಸಲು ಕೋರಿದ್ದು, ಸಂಘ-ಸಂಸ್ಥೆಗಳು ಹಳೆಯ ನೋಟುಗಳಿಂದ ಕಂದಾಯ ಸ್ವೀಕರಿಸುವಂತೆ ಮನವಿ ಮಾಡಿವೆ ಎಂದರು.

Leave a Reply

comments

Related Articles

error: