ಮೈಸೂರು

ಶ್ರೀಕಂಠೇಶ್ವಸ್ವಾಮಿ ದೇಗುಲದ ಸನಿಹದಲ್ಲಿದ್ದ 150ಕ್ಕೂ ಅಂಗಡಿ ಮಳಿಗೆಗಳ ತೆರವು

ಮೈಸೂರು,ಣ.20:- ದಕ್ಷಿಣ ಕಾಶಿ ನಂಜನೂಡು ಪಟ್ಟಣದಲ್ಲಿಂದು ಬೆಳ್ಳಂಬೆಳಿಗ್ಗೆಯೇ ಜೆಸಿಬಿ ಗಳ ಘರ್ಜನೆ ಕೇಳಿಬಂದಿದೆ.

ನಂಜನಗೂಡಿನ ಶ್ರೀಕಂಠೇಶ್ವಸ್ವಾಮಿ ದೇಗುಲದ ಸನಿಹದಲ್ಲಿದ್ದ 150ಕ್ಕೂ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಲಾಗಿದೆ. ನಂಜನಗೂಡು ತಾಲೂಕು ಆಡಳಿತ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿದೆ. ಈ ವೇಳೆ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿದ ಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಖಂಡನೆ ವ್ಯಕ್ತಪಡಿಸಿದ್ದಾರೆ.ಅಂಗಡಿ ಮಳಿಗೆದಾರರಿಗೆ ಈ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: