ಸುದ್ದಿ ಸಂಕ್ಷಿಪ್ತ

ಪ್ರಧಾನಿ ಕಾರ್ಯ ಶ್ಲಾ‍ಘನೀಯ

500, 1000 ರು. ನೋಟುಗಳನ್ನು ಸ್ಥಗಿತಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ನಿರ್ಣಯ ಶ್ಲಾಘನೀಯ ಎಂದು ಪ್ರಗತಿ ಸೇವಾ ಟ್ರಸ್ಟ್ ಹೇಳಿದೆ.

ಈ ನಿರ್ಣಯವು ರಾಜಕೀಯ ಇತಿಹಾಸದಲ್ಲಿಯೇ ಕ್ರಾಂತತಿಕಾರಕ ದಿಟ್ಟ ಹೆಜ್ಜೆಯಾಗಿದೆ. ದೇಶದಲ್ಲಿನ ಅಭಿವೃದ್ಧಿಗೆ ಮಾರಕವಾಗಿರುವ ಕಾಳಧನ, ಭ್ರಷ್ಟಾಚಾರ, ತೆರಿಗೆ ವಂಚನೆ, ಖೋಟಾನೋಟು ಚಲಾವಣೆ ನಿರ್ಮೂಲನೆಯಾಗಲು ಸಾಧ್ಯವಾಗಿದೆ. ದೇಶದಲ್ಲಿನ ಬಡವರು, ಜನಸಾಮಾನ್ಯರು, ಕೂಲಿ ಕಾರ್ಮಿಕರು ಹಾಗೂ ರೈತರ ಬದುಕು ಮುಂದಿನ ದಿನಗಳಲ್ಲಿ ಉತ್ತಮಗೊಳ್ಳುವ ನಿರೀಕ್ಷೆಯನ್ನು ಮೂಡಿಸಿದೆ. ಭವಿಷ್ಯದಲ್ಲಿ ಭಾರತ ಎಲ್ಲ ರಂಗಗಳಲ್ಲೂ ಪ್ರಗತಿದಾಯಕವಾಗಿ ಬೆಳವಣಿಗೆ ಹೊಂದಲು ಸಹಕಾರಿಯಾಗಿದೆ ಎಂದು ಪ್ರಗತಿ ಸೇವಾ ಟ್ರಸ್ಟ್ ಅಭಿಪ್ರಾಯಪಟ್ಟಿದೆ.

Leave a Reply

comments

Related Articles

error: