ಮೈಸೂರು

ಮೈಸೂರಿಗೆ ಬಹರೈನ್ ತಂಡ ಭೇಟಿ

ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಪ್ರತಿವರ್ಷವೂ ಅಂತರರಾಷ್ಟ್ರೀಯ ಯುವಜನ ವಿನಿಮಯ ಕಾರ್ಯಕ್ರಮವನ್ನು ನಡೆಸುತ್ತಿದೆ. ಈ ಪ್ರಯುಕ್ತ  ಶುಕ್ರವಾರ ಬಹರೈನ್ ನ ಹನ್ನೊಂದು ಜನರ ತಂಡ ಮೈಸೂರಿಗೆ ಆಗಮಿಸಿದ್ದು, ವಿವಿಧ ಕಡೆ ಭೇಟಿ ನೀಡಿದೆ.

ಮೈಸೂರಿಗೆ ಆಗಮಿಸಿದ ಬಹರೈನ್ ತಂಡವನ್ನು ಜಿಲ್ಲಾಡಳಿತದ ಪರವಾಗಿ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ನಟರಾಜ್ ಆತ್ಮೀಯವಾಗಿ ಸ್ವಾಗತಿಸಿದರು.

ಬೇರೆ, ಬೇರೆ ದೇಶಗಳಿಂದ  ಆಗಮಿಸುವ ತಂಡಗಳು ಇಲ್ಲಿನ ಸಂಸ್ಕೃತಿ, ಕಲೆ, ಸೇರಿದಂತೆ ಇನ್ನಿತರ ವಿಷಯಗಳನ್ನು ತಿಳಿದುಕೊಳ್ಳಲಿವೆ. ಶುಕ್ರವಾರ ನಗರಕ್ಕಾಮಿಸಿದ ತಂಡ ಹೆಚ್.ಡಿ.ಕೋಟೆ ಗೆ ತೆರಳಿ ಅಲ್ಲಿ ರೇಷ್ಮೆ ಬೆಳೆಯ ಕುರಿತು ಮಾಹಿತಿ ಸಂಗ್ರಹಿಸಿ, ಚರ್ಚೆ ನಡೆಸಿತು. ಬಳಿಕ ಇನ್ಫೋಸಿಸ್ ಗೆ ಭೇಟಿ ನೀಡಿತು.

ಶನಿವಾರ ಮೈಸೂರು ಅರಮನೆ ವೀಕ್ಷಿಸಲಿರುವ ತಂಡ ಶ್ರೀರಂಗಪಟ್ಟಣಕ್ಕೆ ತೆರಳಿ ಅಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲಿದೆ. ನಂತರ ಬೆಂಗಳೂರಿಗೆ ತೆರಳಲಿದೆ.

ನಮ್ಮ ದೇಶದಿಂದಲೂ ಪ್ರತಿ ವರ್ಷವೂ ಬೇರೆ, ಬೇರೆ ದೇಶಗಳಿಗೆ ತಂಡವು ತೆರಳಿ ಅಲ್ಲಿನ ಕಲೆ,ಸಂಸ್ಕೃತಿ, ಆರ್ಥಿಕತೆ ಕುರಿತು ಮಾಹಿತಿ ಕಲೆ ಹಾಕುತ್ತದೆ.

Leave a Reply

comments

Related Articles

error: