ದೇಶಮನರಂಜನೆ

ಚಾಕಲೇಟ್-ಆಟಿಕೆಗಳ ಜೊತೆ ಇರಬೇಕಾದ ಪುಟಾಣಿ ಗೋವಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ!

ದೇಶ(ಮುಂಬೈ)ನ.20:- ಪುಟಾಣಿಗಳು ಚಿತ್ರದಲ್ಲಿ ಅಭಿನಯಿಸಿದ್ದು ನೋಡಿದ್ದೇವೆ. ಆದರೆ ಎರಡು ವರ್ಷದ ಪುಟಾಣಿ ಚಿತ್ರದಲ್ಲಿ ನಾಯಕಿಯಾಗಲು ಸಾಧ್ಯನಾ? ಆದರೆ ಎರಡು ವರ್ಷದ ಬಾಲಕಿಯೋರ್ವಳು ಅದ್ಭುತವಾಗಿ ಅಭಿನಯಿಸಿದ ‘ಪಿಹು’ ಚಿತ್ರ ಗೋವಾದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ವಿನೋದ್ ಕಾಪಡಿ ನಿರ್ದೇಶಿತ ಸುಮಾರು ಒಂದೂವರೆ ಗಂಟೆಗಳ  ಚಿತ್ರದಲ್ಲಿ ಎರಡು ವರ್ಷದ ಮುದ್ದು ಪುಟಾಣಿ ಮಾಯರಾ ವಿಶ್ವಕರ್ಮ ತನ್ನ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾಳಂತೆ. ಮುಂಬೈನಲ್ಲಿ ಟ್ರೈಲರ್ ಬಿಡುಗಡೆಯ ಸಂದರ್ಭ ಹೊಸನಾಯಕಿಯಾದ  ಈ ಪುಟಾಣಿ ಕೂಡ ಇದ್ದಳು. ಈ ಚಿತ್ರವನ್ನು ನಿರ್ಮಿಸಲು ತುಂಬಾನೇ ಕಠಿಣವಿತ್ತು. ಕೆಲವು ಸಲ ಕೆಲವು ನಿರ್ಮಾಪಕರು ಇದನ್ನು ಇಷ್ಟಪಟ್ಟಿರಲಿಲ್ಲ.ಆದರೂ ಚಿತ್ರ ತಯಾರಾಗಿದ್ದು,ಉತ್ತಮವಾಗಿ ಮೂಡಿಬಂದಿದೆ. ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಎರಡು ವರ್ಷದ ಮಗುವಿನ ಜೊತೆ ಕೆಲಸ ಮಾಡುವುದು ತುಂಬಾನೇ ಕಷ್ಟವಿತ್ತು. ಕೆಲವು ದೃಶ್ಯಗಳನ್ನು  ಚಿತ್ರೀಕರಿಸಲು ಅವಳಿಗೆ ಚಾಕಲೇಟ್ ಮತ್ತು ಆಟಿಕೆಗಳ ಆಸೆ ತೋರಿಸಿ ಚಿತ್ರೀಕರಿಸಿದ್ದೇವೆ. ಎರಡು ವರ್ಷದ ಮಗುವಿನ ಬಳಿ ಯಾವ ರೀತಿ ಅಭಿನಯವನ್ನು ಮಾಡಿಸುವುದು ಎಂಬ ಪ್ರಶ್ನೆಗಳೆದ್ದಿತ್ತು. ಈ ಪುಟಾಣಿಯ ಜೊತೆಗಿನ ಚಿತ್ರೀಕರಣ  ಅಸಾಧ್ಯವೆಂದುಕೊಳ್ಳುತ್ತಿದ್ದೆ. ಕಥೆ ಮಸ್ತಿಷ್ಕದಲ್ಲಿ ಚಿತ್ರೀಕರಣಗೊಂಡಿತ್ತು. ಸ್ಕ್ರೀನ್ ಪ್ಲೇ ಬರೆದಾಗಿತ್ತು. ನಾನು ತಪ್ಪು ಮಾಡುತ್ತಿದ್ದೇನೆ ಅನಿಸಿತ್ತು.   ಯಾಕೆಂದರೆ 44ವರ್ಷದ ಪುರುಷನೋರ್ವ ಮಗುವಿನ ಮೆದುಳಿಗೆ ಇಳಿದು ಕಥೆ ಬರೆಯಲು ಪ್ರಯತ್ನಿಸುತ್ತಿದ್ದು , ಬಳಿಕ 6ತಿಂಗಳ ಕಾಲ  ಮಗುವಿನ ಜೊತೆಗಿರಲು ನಿರ್ಧರಿಸಿದೆ  ಎಂದು ವಿನೋದ್ ಕಾಪಡಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಚಿತ್ರವನ್ನು ನೈಜವಾಗಿ ಚಿತ್ರಿಸಲಾಗಿದ್ದು, ಚಿತ್ರದಲ್ಲಿ ಒಂದು ಬಾರಿಯೂ ಲೈಟ್ , ಕ್ಯಾಮರಾ, ಆಕ್ಷನ್ ಎಂದು ಹೇಳಿಲ್ಲವಂತೆ. (ಎಸ್.ಎಚ್)

Leave a Reply

comments

Related Articles

error: