ಮೈಸೂರು

ಸಂಪ್‍ ಒಳಕ್ಕೆ ಬಿದ್ದು ಮಗು ಸಾವು

img-20161112-wa0014ತೆರೆದ ಸಂಪಿಗೆ ಮಗುವೊಂದು ಬಿದ್ದು ಮೃತಪಟ್ಟ ಘಟನೆ ಮೈಸೂರಿನ ರಮಾಬಾಯಿ ನಗರದಲ್ಲಿ ನಡೆದಿದೆ.

ಮೈಸೂರು ಹೊರವಲಯದ ರಮಾಬಾಯಿನಗರದ ನಿವಾಸಿ ನಾಗಮ್ಮ ಅವರ ಪುತ್ರ ನಾಲ್ಕೂವರೆ ವರ್ಷದ ಸುಭಾಷ್ ಮೃತ ದುರ್ದೈವಿ. ಆತ ರಮಾಬಾಯಿ ನಗರದ  ಅಂಬೇಡ್ಕರ್ ಸಮುದಾಯ ಭವನದ ಆವರಣದ ಬಳಿ ಶುಕ್ರವಾರ ಮಧ್ಯಾಹ್ನ ಆಟವಾಡಲು ತೆರಳಿದ್ದ ಎನ್ನಲಾಗಿದೆ. ಆದರೆ ಆತ ಮಧ್ಯಾಹ್ನದ ಬಳಿಕ ನಾಪತ್ತೆಯಾಗಿದ್ದು, ಮನೆಯವರು ಕಂಗಾಲಾಗಿದ್ದರು. ಆದರೆ ಶನಿವಾರ ಬೆಳಿಗ್ಗೆ  ಆವರಣದಲ್ಲಿರುವ  ತೆರೆದ ಸಂಪಿನಲ್ಲಿ ಆತನ ಮೃತದೇಹ ಪತ್ತೆಯಾಗಿದೆ.

ಸೌತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

img-20161112-wa0015

Leave a Reply

comments

Related Articles

error: