ವಿದೇಶ

ಅಣು ಸಹಕಾರ ಒಪ್ಪಂದಕ್ಕೆ ಭಾರತ-ಜಪಾನ್ ಸಹಿ

ಟೊಕಿಯೊ: ಭಾರತ ಹಾಗೂ ಜಪಾನ್ ಶುಕ್ರವಾರ ಐತಿಹಾಸಿಕ ನಾಗರಿಕ ಅಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿವೆ. ಇದರೊಂದಿಗೆ ಜಪಾನ್ ಜತೆ ಇಂತಹ ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ಪರಮಾಣು ನಿಶ್ಯಸ್ತ್ರೀಕರಣ ಒಪ್ಪಂದ ‘ಎನ್‍ಪಿಟಿ’ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಮೂದು ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರದಂದು ಜಪಾನ್ ಪ್ರಧಾನಿ ಶಿನ್ಜೊ ಅಬೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದರು. ಒಟ್ಟು 10 ಒಪ್ಪಂದಗಳಿಗೆ ಈ ಸಂದರ್ಭದಲ್ಲಿ ಸಹಿ ಹಾಕಲಾಯಿತು. ಪರಮಾಣು ತಂತ್ರಜ್ಞಾನದಲ್ಲಿ ಜಪಾನ್ ವಿಶ್ವದಲ್ಲೇ ಮುಂಚೂಣಿಯಲ್ಲಿದೆ.

ಅಣು ಒಪ್ಪಂದದಿಂದ ಭಾರತದ ವಿದ್ಯುತ್ ಕ್ಷೇತ್ರದಲ್ಲಿ ಪ್ರಗತಿ ಕಂಡುಬರುವ ನಿರೀಕ್ಷೆಯಿದೆ. ಪರಮಾಣು ತಂತ್ರಜ್ಞಾನ ಸೇರಿ ರಿಯಾಕ್ಟರ್‍ಗಳ ಸ್ಥಾಪನೆಗೆ ಜಪಾನ್ ಮೂಲ ಸೌಕರ್ಯಗಳನ್ನು ಒದಗಿಸಲಿದೆ. ಜಪಾನ್ ಒಡೆತನದ ವೆಸ್ಟಿಂಗ್‍ಹೌಸ್ ಇಲೆಕ್ಟ್ರಿಕ್ ಹಾಗೂ ಜಿಇ ಎನರ್ಜಿ ಭಾರತದಲ್ಲಿ ಹೊಸ ಅಣುಸ್ಥಾವರಗಳನ್ನು ಸ್ಥಾಪಿಸಲು ನೆರವಾಗಲಿದೆ.

Leave a Reply

comments

Related Articles

error: