ಕರ್ನಾಟಕ

ರೆಡ್ಡಿ ಪುತ್ರಿ ವಿವಾಹಕ್ಕೆ ‘ವಿಜಯನಗರ ಸಾಮ್ರಾಜ್ಯ’ ಮಾದರಿಯ ಸೆಟ್ ಸಿದ್ಧ

ಪುತ್ರಿ ಬ್ರಹ್ಮಿಣಿ ಗಣ್ಯರನ್ನು ಆಮಂತ್ರಿಸಲು ಅದ್ಧೂರಿಯಾಗಿ ಆಹ್ವಾನ ಪತ್ರಿಕೆ ಮಾಡಿಸಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ, ಇದೀಗ ವಿವಾಹಕ್ಕೆ 200 ಕೋಟಿ ರು. ವೆಚ್ಚದಲ್ಲಿ ವಿಜಯನಗರ ಸಾಮ್ರಾಜ್ಯ ಮಾದರಿಯಲ್ಲಿ ಬೃಹತ್ ಸೆಟ್ ಹಾಕಿಸಿದ್ದಾರೆ. ಮದುವೆ ಮಂಟಪವಾಗಿ ವಿಜಯ ವಿಠ್ಠಲ ದೇವಾಲಯ ಮಾದರಿಯನ್ನು ನಿರ್ಮಿಸಲಾಗಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ 36 ಎಕರೆ ಸ್ಥಳದಲ್ಲಿ ಈ ಸೆಟ್ ಹಾಕಿಸಲಾಗಿದ್ದು, 30ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಸ್ಥಳದಲ್ಲಿ ನಿಯೋಜನೆಗೊಂಡಿದ್ದಾರೆ. ಇದಕ್ಕೆ ಸ್ವಲ್ಪ ದೂರದಲ್ಲಿ ಎರಡು ಐಷಾರಾಮಿ ವಿಶ್ರಾಂತಿಗೃಹಗಳನ್ನು ನಿರ್ಮಿಸಲಾಗಿದೆ. ವಧು ಮತ್ತು ವರರಿಗೆ ಮತ್ತು ಅವರ ಕುಟುಂಬದವರಿಗೆ ಈ ಮನೆಗಳು ಮೀಸಲು.

ನವೆಂಬರ್ 16ರಂದು ನಡೆಯುವ ಮದುವೆಗೆ ಈಗಾಗಲೇ ಹಲವು ಶಾಸ್ತ್ರಗಳು ನಡೆಯುತ್ತಿವೆ. ಮದುವೆಗೆ ಸುಮಾರು 50 ಸಾವಿರ ಜನರನ್ನು ಆಹ್ವಾನಿಸಲಾಗಿದೆ.

ಶಾರುಖ್ ಖಾನ್ ನೃತ್ಯ ಪ್ರದರ್ಶನ!: ಅರಮನೆ ಮೈದಾನ ನ.15ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ‘ಸ್ಟಾರ್ ನೈಟ್’ ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಕತ್ರಿನಾ ಕೈಫ್, ತಮನ್ನಾ ಸೇರಿದಂತೆ ಕನ್ನಡ, ತೆಲುಗು, ಹಿಂದಿ ಭಾಷೆಯ ಖ್ಯಾತ ನಟ ನಟಿಯರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಕಾರ್ಯಕ್ರಮದ ಪ್ರಸಾರವನ್ನು ಯಾವ ಮಾಧ್ಯಮಕ್ಕೂ ನೀಡದೆ, ತಮ್ಮ ಒಡೆತನದ ಸುದ್ದಿವಾಹಿನಿ ನೇರ ಪ್ರಸಾರ ಮಾಡಲಿದೆ.

Leave a Reply

comments

Related Articles

error: