ಮೈಸೂರು

ಮೈಸೂರಿನ ಚಿತ್ರ ಕಲಾವಿದ ಜಿಎಲ್‍ಎನ್‍ ಸಿಂಹ ಅವರಿಗೆ ‘ಆಳ್ವಾಸ್ ಚಿತ್ರಸಿರಿ’ ಪ್ರಶಸ್ತಿ

ಮೈಸೂರಿನ ನಂಜನಗೂಡು ತಾಲೂಕಿನ ಕಳಲೆ ಗ್ರಾಮದ ಕಲಾವಿದ ಜಿ.ಎಲ್‍.ಎನ್. ಸಿಂಹ ಅವರಿಗೆ ನ.13ರಂದು ಮೂಡುಬಿದಿರೆಯಲ್ಲಿ ‘ಆಳ್ವಾಸ್ ಚಿತ್ರಸಿರಿ’ ಪ್ರಶಸ್ತಿ ಪ್ರದಾನ ನಡೆಯಲಿದೆ.

ಕಲೆ ಮತ್ತು ಸಂಸ್ಕೃತಿ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ‘ಆಳ್ವಾಸ್ ಚಿತ್ರಸಿರಿ’ ಪ್ರಶಸ್ತಿಯನ್ನು ನೀಡಲಿದೆ. ನ.10ರಿಂದ ರಾಜ್ಯ ಮಟ್ಟದ  ಕಲಾವಿದರ ಕಾರ್ಯಾಗಾರ ಆರಂಭವಾಗಿದ್ದು, ಚಿತ್ರಸಿರಿ ಪ್ರಶಸ್ತಿ ಪ್ರದಾನದೊಂದಿಗೆ ಕಾರ್ಯಕ್ರಮ ಕೊನೆಗೊಳ್ಳಲಿದೆ.

ಪ್ರಸ್ತುತ ವರ್ಷ ಜಿಎಲ್‍ಎನ್‍ ಸಿಂಹ ಅವರು ಚಿತ್ರಕಲೆಯಲ್ಲಿ ಸಾಧನೆಯನ್ನು ಗುರುತಿಸಿ ‘ಆಳ್ವಾಸ್ ಚಿತ್ರಸಿರಿ’ ಪ್ರಶಸ್ತಿ ನೀಡಲಾಗುತ್ತಿದೆ.

ಸಿಂಹ ಅವರ ಚಿತ್ರಗಳು ಪ್ರಾಚೀನ ವೇದ ಪುರಾಣ ಮತ್ತು ಪೌರಾಣಿಕ ಕಥೆಗಳನ್ನು ಆಧರಿಸಿ ರಚಿತವಾಗಿವೆ. ಸುಧಾ ಮತ್ತು ಮಯೂರದಲ್ಲಿ ಸಂಪಾದಕ ಎಂ.ಬಿ. ಸಿಂಗ್ ಅವರೊಂದಿಗೆ ಚಿತ್ರ ಕಲಾವಿದರಾಗಿ ದುಡಿದ ಸಿಂಹ ಬಳಿಕ ಕೆಲಸಕ್ಕೆ ರಾಜೀನಾಮೆ ನೀಡಿ ಮೈಸೂರಿನಲ್ಲಿ ಸ್ವತಂತ್ರರಾಗಿ ದುಡಿಯಲಾರಂಭಿಸಿದರು.

ಸಿಂಹ ಅವರು ಈಗಾಗಲೇ ರೋಟರಿ ರಾಮ್‍ಸನ್ಸ್ ಕಲಾ ಪ್ರತಿಷ್ಠಾನ ಪ್ರಶಸ್ರಿ(2003), ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶ್ತಿ(2004), ಎಮ್‍. ವೀರಪ್ಪ ಸ್ಮರಣಾರ್ಥ ಪ್ರಶಸ್ತಿ(2004), ತಿಪ್ಪಾಜಿ ಚಿತ್ರಗಾರ್ ಪ್ರಶಸ್ತಿ(2011) ಎಮ್‍ಟಿವಿ ಆಚಾರ್ಯ ಪ್ರಶಸ್ತಿ(2011), ಶ್ರೀ ವನಮಾಲಿ ಪ್ರಶಸ್ತಿ(2015)ಗಳನ್ನು ಪಡೆದಿದ್ದಾರೆ.

Leave a Reply

comments

Related Articles

error: