ಕರ್ನಾಟಕ

ಅನುಮಾನಾಸ್ಪದ ರೀತಿಯಲ್ಲಿ ನವ ವಿವಾಹಿತೆ ಮೃತದೇಹ ಪತ್ತೆ

ರಾಜ್ಯ(ಮಂಡ್ಯ)ನ.21:- ಅನುಮಾನಾಸ್ಪದ ರೀತಿಯಲ್ಲಿ ನವ ವಿವಾಹಿತೆ ಸಾವನ್ನಪ್ಪಿದ ಘಟನೆ ಮಂಡ್ಯ ತಾಲೂಕಿನ ಸಂತೆ ಕಸಲಗೆರೆಯಲ್ಲಿ ನಡೆದಿದೆ.

ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮೃತಳನ್ನು ಅನುಶ್ರೀ(23) ಎಂದು ಹೇಳಲಾಗಿದೆ. ಈಕೆಯನ್ನು ಎಂಟು ತಿಂಗಳ ಹಿಂದೆ ಚೇತನ್ ಎಂಬಾತನ ಜೊತೆ ವಿವಾಹ ಮಾಡಿಕೊಡಲಾಗಿತ್ತು. ವರದಕ್ಷಿಣೆ ಗಾಗಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಅನುಶ್ರೀ ಪೋಷಕರಿಗೆ ವಿಚಾರ ತಿಳಿಯುತ್ತಿದ್ದಂತೆ ಚೇತನ್ ಪರಾರಿಯಾಗಿದ್ದಾನೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: