ಮೈಸೂರು

ಯೋಗ ಪ್ರದರ್ಶನಕ್ಕೆ ಗಿನ್ನಿಸ್ ದಾಖಲೆಯ ಹಿರಿಮೆ : ಧನ್ಯವಾದ ಅರ್ಪಿಸಿದ ಡಿ.ರಂದೀಪ್

ಮೈಸೂರು,ನ.21:- ಯೋಗ ಪ್ರದರ್ಶನಕ್ಕೆ  ಗಿನ್ನಿಸ್ ದಾಖಲೆಯ  ಹಿರಿಮೆ ಲಭಿಸುತ್ತಿದ್ದಂತೆ ಜಿಲ್ಲಾಧಿಕಾರಿ ಡಿ.ರಂದೀಪ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು ಮೈಸೂರಿಗೆ ಹಿಂದೆ ಸ್ವಚ್ಛ ನಗರಿ ಎಂಬ ಪ್ರಶಸ್ತಿ ಬಂದಿತ್ತು . ಪ್ರವಾಸಿ ತಾಣವಾಗಿಯೂ ಮೈಸೂರು ಪ್ರಸಿದ್ಧಿ ಗಳಿಸಿದೆ. ಈಗ ಯೋಗದ ಹೆಸರಿನಲ್ಲಿ ಗಿನ್ನಿಸ್ ದಾಖಲೆ ಬರೆದಿರುವುದು ಸಂತಸದ ವಿಚಾರ.  ಇದರೊಂದಿಗೆ ಮೈಸೂರಿಗೆ ಯೋಗ ರಾಜಧಾನಿ ಎಂಬ ಪ್ರಶಸ್ತಿ ದಕ್ಕಿದೆ. ಯೋಗ ದಿನಾಚರಣೆಯ ನೆಪದಲ್ಲಿ ದಾಖಲೆಯ ಪ್ರಯತ್ನ ಮಾಡಲಾಗಿತ್ತು . ಐದು ತಿಂಗಳ ನಂತರ ಆ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಅರಮನೆ ಆವರಣದಲ್ಲಿ ನಡೆದ ಯೋಗ ಮಾನವ ಸರಪಳಿಗೆ ದಾಖಲೆ ಸಿಗುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ  ಮೈಸೂರಿನ ಸಮಸ್ತ ನಾಗರಿಕರು, ಯೋಗ ಸಂಸ್ಥೆಗಳು, ಸಂಘಟನೆಗಳಿಗೆ ಧನ್ಯವಾದ ಅರ್ಪಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: