ಸುದ್ದಿ ಸಂಕ್ಷಿಪ್ತ

ವಾರ್ಷಿಕ ಸಂಗೀತ ಸ್ಪರ್ಧೆ

ಶ್ರೀಕೃಷ್ಣಗಾನಸಭಾ ವತಿಯಿಂದ ನಡೆಸುತ್ತಿರುವ ವಾರ್ಷಿಕ ಸಂಗೀತ ಸ್ಪರ್ಧೆಯನ್ನು ನ.19 ರಂದು ಬೆಳಗ್ಗೆ 11 ಗಂಟೆಗೆ ಗೋಕುಲಂ 3ನೇ ಹಂತದಲ್ಲಿರುವ ಕೃಷ್ಣಗಾನಸಭಾ ದೇಗುಲದ ಆವರಣದಲ್ಲಿ ಆಯೋಜಿಸಲಾಗಿದೆ. ಭಾವಗೀತೆ/ಭಕ್ತಿಗೀತೆ, ಜನಪದ ಗೀತೆ, ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ ಪ್ರಕಾರಗಳನ್ನ ಆಯೋಜಿಸಲಾಗಿದೆ. ಭಾಗವಹಿಸುವವರು 50 ರೂ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಭಾಗವಹಿಸುವ ಪ್ರತಿಯೊಬ್ಬರಿಗೂ ಸ್ಮರಣಿಕೆ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ. 10 ವರ್ಷ ಮೇಲ್ಪಟ್ಟ ಶಾಲಾ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- ಶ್ರೀಧರ್ ರಾಜ ಅರಸ್- 0821/2512812, 2411148.

Leave a Reply

comments

Related Articles

error: