
ಮೈಸೂರು
ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಕಾಂಗ್ರೆಸ್ ಏಜೆಂಟ್ : ಅಯೂಬ್ ಖಾನ್
ಮೈಸೂರು, ನ. 21 : ಕಾಂಗ್ರೆಸ್ ಬಿಜೆಪಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು, ಇವೆರಡು ಪಕ್ಷಗಳು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಒಳ ಒಪ್ಪಂದದ ಮೂಲಕ ಆಡಳಿತ ನಡೆಸುತ್ತಿವೆ ಎಂದು ಇಂಡಿಯನ್ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಅಯೂಬ್ ಖಾನ್ ಆರೋಪಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಒಳ ಒಪ್ಪಂದ ರಾಜಕಾರಣದಿಂದ ಕೇಂದ್ರದಲ್ಲಿ ಮೂರನೇ ಪಕ್ಷ ಆಡಳಿತಕ್ಕೆ ಬರಲು ಸಾಧ್ಯವಾಗುತ್ತಿಲ್ಲ, ಅದರಂತೆ ರಾಜ್ಯದಲ್ಲಿಯೂ ಮಾಜಿ ವಿರೋಧ ಪಕ್ಷದ ನಾಯಕ ಈಶ್ವರಪ್ಪ ಮತ್ತು ಸಿಎಂ ಸಿದ್ದರಾಮಯ್ಯನವರ ನಡುವೆ ಒಳ ಒಪ್ಪಂದವಾಗಿದ್ದು, ಈಶ್ವರಪ್ಪ ಕಾಂಗ್ರೆಸ್ ಎಜೆಂಟರಾಗಿದ್ದು ಬ್ರಿಗೇಡ್ ಮೂಲಕ ಬಿಜೆಪಿಯನ್ನು ಮುಗಿಸಲು ಯತ್ನಿಸಿದ್ದರು ಇಂತಹ ಕೆಟ್ಟ ರಾಜಕಾರಣದಿಂದ ಪ್ರಜಾಪ್ರಭುತ್ವಕ್ಕೆ ಅಪಾಯವಿದ್ದು ಇಂತಹ ಸ್ವಾರ್ಥ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಲು ಮುಂದಿನ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಸ್ಪರ್ಧೆಗಿಳಿಯುಲಿದ್ದು ಪಕ್ಷಕ್ಕೆ ಬೆಂಬಲ ನೀಡುವಂತೆ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಗುಜರಾತ್ ವಿಕಾಸ್ ಭಾಷಣ ಸತ್ಯಕ್ಕೆ ದೂರವಾಗಿದೆ, ರಾಜ್ಯದಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ, ರೈತರಿಗೆ ವಿದ್ಯುತ್ತಿಲ್ಲ, ಗ್ರಾಮೀಣ ಭಾಗದಲ್ಲಿ ಸೂಕ್ತ ರಸ್ತೆ, ಆಸ್ಪತ್ರೆಗಳಿಲ್ಲ, ಇಂದಿಗೂ ಅಲ್ಲಿನ ಜನರು 30 ರಿಂದ 50 ರೂಗಳಿಗಾಗಿ ನಿತ್ಯ ಕೂಲಿ ಮಾಡುತ್ತಿದ್ದು ಗುಜರಾತ್ ರಾಜ್ಯವು ಅಭಿವೃದ್ಧಿಯೇ ಕಾಣದ ಬೆಂಗಾಡಾಗಿದೆ, ಗುಜರಾತಿನ ಹಲವಾರು ಬಿಜೆಪಿ ಮುಖಂಡರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ 25 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಸೈಯದ್ ಅಮನ್ನುಲ್ಲಾ, ಸಹ ಕಾರ್ಯದರ್ಶಿ ಅಸ್ರತ್, ಹೆಚ್.ಡಿ.ಕೋಟೆ ತಾಲ್ಲೂಕಿನ ನಟರಾಜು, ಗೋಪಾಲ್ ಇದ್ದರು. (ವರದಿ : ಕೆ.ಎಂ.ಆರ್)