ಮನರಂಜನೆ

ನಾಲ್ಕು ಭಾಷೆಯಲ್ಲಿ ರಾಕಿಂಗ್ ಸ್ಟಾರ್ ಕೆಜಿಎಫ್ ಸಿನಿಮಾ

ಬೆಂಗಳೂರು,ನ.21: ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಕೆಜಿಎಫ್’ ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ಸಿನಿಮಾಸ ಪೋಸ್ಟರ್ ಗಳಿಂದ ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚಿಸಿದೆ.

ಹೊಂಬಾಳೆ ಫಿಲ್ಮ್ಂ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ `ಕೆಜಿಎಫ್’ ಚಿತ್ರದ ಶೂಟಿಂಗ್ ಮುಗಿರುವ ಹಂತದಲ್ಲಿದೆ. ಕೆಜಿಎಫ್ ಸಿನಿಮಾದಿಂದ ಬಂದಿರುವ ಹೊಸ ಪೋಸ್ಟರ್ ಗಳು ಹೊಸ ಕಥೆಯನ್ನು ಹೇಳುತ್ತಿವೆ. ಸಧ್ಯ ಪೋಸ್ಟರ್ ನಾಲ್ಕು ಭಾಷೆಗಳಲ್ಲಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ನಾಲ್ಕು ಭಾಷೆಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಮೊದಲು ರಿವೀಲ್ ಆದ ರಾಕಿಂಗ್ ಸ್ಟಾರ್ ಯಶ್ ಕೋಲಾರ ಚಿನ್ನದ ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕನ ರೀತಿ ಕಾಣಿಸಿಕೊಂಡಿದ್ದರು. ಆದರೆ ಈಗ ಯಶ್ ಲುಕ್ ಬದಲಾಗಿದೆ. ಈ ಫೋಟೋ ನೋಡಿದರೆ ಅಭಿಮಾನಿಗಳ ನಿರೀಕ್ಷೆಯ ಕೌತುಕ ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತಿದೆ. ವೈಟ್ ಆಂಡ್ ವೈಟ್ ಡ್ರೆಸ್ ಹಾಕಿಕೊಂಡು ಒಳ್ಳೆ ಶಿಪ್ ಕ್ಯಾಪ್ಟನ್ ರೀತಿ ಕಾಣಿಸಿಕೊಂಡಿದ್ದಾರೆ. ( ವರದಿ : ಪಿ.ಎಸ್ )

Leave a Reply

comments

Related Articles

error: