ಸುದ್ದಿ ಸಂಕ್ಷಿಪ್ತ

ಭಾಸಂಗೆ ಬಳಗದ ವಾರ್ಷಿಕೋತ್ಸವ – ಸಾಂಸ್ಕೃತಿಕ ಕಾರ್ಯಕ್ರಮ

ಭಾಸಂಗೆ ಬಳಗದ ಎಂಟನೇ ವಾರ್ಷಿಕೋತ್ಸವದ 67ನೇ ಕಾರ್ಯಕ್ರಮವನ್ನು ನ.13ರ ಭಾನುವಾರ ಸಂಜೆ 5.30ಕ್ಕೆ ಮೈಸೂರಿನ ಜೆ.ಎಲ್.ಬಿ. ರಸ್ತೆಯಲ್ಲಿರುವ ವಾಸುದೇವಾಚಾರ್ಯ ಭವನ ನಾದಬ್ರಹ್ಮ ಸಂಗೀತ ಸಭಾದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಖ್ಯಾತ ಸುಗಮ ಸಂಗೀತ ಗಾಯಕರಾದ ಹೆಚ್.ಆರ್. ಲೀಲಾವತಿ, ವನ್ಯಜೀವಿ ಛಾಯಾಗ್ರಾಹಕ ಎಸ್. ತಿಪ್ಪೇಸ್ವಾಮಿ, ಕಲಾ ವಿಮರ್ಶಕರಾದ ಡಾ.ರಮಾ ಬೆನ್ನೂರು ಅವರುಗಳಿಗೆ ಸನ್ಮಾನ ಏರ್ಪಡಿಸಿದ್ದು,  ಜನಪ್ರಿಯ ಗಾಯಕರಾದ ಪುತ್ತೂರು ನರಸಿಂಹ ನಾಯಕ್ ಅವರಿಂದ ಭಾವಗೀತೆ ಹಾಗೂ ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಲಿದೆ.

Leave a Reply

comments

Related Articles

error: