ಮೈಸೂರು

ಕರುಣೆ, ಪ್ರೀತಿ ಇದ್ದವರಿಗೆ ಭಗವಂತ ವಿಶೇಷ ಮಕ್ಕಳನ್ನು ಕರುಣಿಸುತ್ತಾನೆ: ಆರ್. ಗುರು

ಮನದಲ್ಲಿ ಕರುಣೆ ತುಂಬಿದವರಿಗೆ ದೇವರು ವಿಶೇಷ ಮಕ್ಕಳನ್ನು ಕರುಣಿಸುತ್ತಾನೆ ಎಂದು ಎನ್‍ಆರ್ ರಂಗರಾವ್ ಆ್ಯಂಡ್ ಸನ್ಸ್ ಸಂಸ್ಥೆಯ ಅಧ್ಯಕ್ಷ ಆರ್. ಗುರು ಹೇಳಿದರು.

ನಗರದ ಜಗನ್ಮೋಹನ ಅರಮನೆಯಲ್ಲಿ ಕರುಣಾಮತಿ ಪ್ರತಿಷ್ಠಾನ ಶುಕ್ರವಾರ ಹಮ್ಮಿಕೊಂಡಿದ್ದ ‘ನಾವು ವಿಶೇಷ ಮಕ್ಕಳು ಹಾಗೂ ನಾವು ಮಾಡೋದೆಲ್ಲ ವಿಶೇಷ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಶೇಷ ಮಕ್ಕಳಿಗೆ ಪ್ರೀತಿ ವ್ಯಾತ್ಸಲ್ಯ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಹೀಗಾಗಿ ಮನದಲ್ಲಿ ಹೆಚ್ಚು ಕರುಣೆ, ಪ್ರೀತಿ ತುಂಬಿಕೊಂಡವರಿಗೆ ಭಗವಂತ ವಿಶೇಷ ಮಕ್ಕಳನ್ನು ನೀಡುತ್ತಾನೆ. ಪೋಷಕರು ಕೂಡ ವಿಶೇಷ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸೇಫ್‍ವ್ಹೀಲ್ ಸಮೂಹ ಸಂಸ್ಥೆಗಳ ಮಾಲೀಕ ಬಿ.ಎಸ್. ಪ್ರಶಾಂತ್, ಕರುಣಾಮಯಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಜಿ.ಸಿ. ಕಿರಣ್ ಕುಮಾರ್, ಇನ್ಫೋಸಿಸ್ ಭದ್ರತಾ ವಿಭಾಗದ ಪ್ರಾದೇಶಿಕ ಮುಖ್ಯಸ್ಥ ಕ್ಯಾಪ್ಟನ್ ರಾಮದಾಸ್, ಮಂಜೇಶ್ವರ್ ಕಾಮತ್, ಮೈಸೂರು ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಎಂ. ಶ್ರೀಧರ್ ದೀಕ್ಷಿತ್, ರೇಸ್ ಕ್ಲಬ್ ಅಧ್ಯಕ್ಷ ಹನುಮಪ್ರಸಾದ್ ಮತ್ತು ಇತರರು ಉಪಸ್ಥಿತರಿದ್ದರು.

special-kids-1

Leave a Reply

comments

Related Articles

error: