ಮೈಸೂರು

ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ: ಡಾ.ಬೆಳ್ಳಿಯಪ್ಪ

ಕಠಿಣ ಪರಿಶ್ರಮವೇ ಯಶಸ್ಸಿಗೆ ಮೂಲ. ಕಠಿಣ ಶ್ರಮದಿಂದ ಮಾತ್ರ ಯಶಸ್ಸನ್ನು ಪಡೆಯಬಹುದು ಎಂದು ಅರುಣಾಚಲಪ್ರದೇಶದ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ.ಕೆ.ಸಿ.ಬೆಳ್ಳಿಯಪ್ಪ ಹೇಳಿದರು.

ಮೈಸೂರಿನ ಶ್ರೀಜಯಚಾಮರಾಜೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾದ ತಾಂತ್ರಿಕ ಕಾರ್ಯಕ್ರಮ ಇನ್ಫೋತ್ಸವ-2016ನ್ನು ಡಾ.ಕೆ.ಸಿ.ಬೆಳ್ಳಿಯಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಂದಿನ ಯುವಜನತೆಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವ ಅವಕಾಶವಿದೆ. ಯಶಸ್ಸು ಕೇವಲ ಪುಸ್ತಕಗಳಿಂದ ಬರುವಂಥದ್ದಲ್ಲ. ನಿರಂತರ ಕಠಿಣ ಪರಿಶ್ರಮ ನಡೆಸಿದಾಗ ಮಾತ್ರ ಯಶಸ್ಸು ದೊರಕಲಿದೆ. ಇಂದಿನ ವಿದ್ಯಾರ್ಥಿಗಳ ಯೋಚನೆಗಳು ನಾವೀನ್ಯತೆಯ ಮೇಲೆ ಬೆಳಕು ಚೆಲ್ಲಬೇಕು. ಅದೇ ಅವರ ಸಾಧನೆಗೆ ಪ್ರಮುಖ ಪಾತ್ರ ವಹಿಸಲಿದೆ. ಹೆಚ್ಚಿನ ಶ್ರಮದಿಂದ ಕೆಲಸ ಮಾಡಿದಾಗ ಯಶಸ್ಸಿನ ದಾರಿ ಗೋಚರಿಸಲಿದೆ ಎಂದರು.

ಜೆ.ಎಸ್.ಎಸ್ ತಾಂತ್ರಿಕ ವಿಭಾಗದ ಡಾ.ಸಿ.ರಂಗನಾಥಯ್ಯ ಮಾತನಾಡಿ ವಿದ್ಯಾರ್ಥಿಗಳು ಕೇವಲ ತಮ್ಮ ಪ್ರಾಜಕ್ಟಗಳ ಮೇಲೆ ಗಮನವಿರಿಸಿದರೆ ಸಾಲದು ಅದರಿಂದ ಸಮಾಜಕ್ಕೆ ಉಪಯೋಗ ಆಗುವಂತಿರಬೇಕು ಎಂದು ತಿಳಿಸಿದರು.

ಜೆ.ಎಸ್.ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಕೆ.ಎಸ್.ಲೋಕೇಶ್, ಪ್ರಾಂಶುಪಾಲ ಡಾ.ಜಿ.ಎಂ.ಶಶಿಧರ್, ವಿಭಾಗದ ಮುಖ್ಯಸ್ಥ ಡಾ.ಎಸ್.ಕೆ.ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: