
ರಾಜ್ಯ(ಮಡಿಕೇರಿ)ನ.22:- ‘ಕಾವೇರಿ ಚಿತ್ರ ಮಂದಿರ’ದಲ್ಲಿ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯ ವತಿಯಿಂದ ಪ್ರಶಸ್ತಿ ವಿಜೇತ ಚಲನಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಈ ಪಟ್ಟಿಯಲ್ಲಿ ಕೊಡಗನ್ನು ಪ್ರತಿನಿಧಿಸುವ ಕೊಡವ ಭಾಷೆಯ ಒಂದೂ ಚಿತ್ರವೂ ಇಲ್ಲದೇ ಇರುವುದನ್ನು ಕೊಡಗಿನ ‘ರಂಗ ಚಾವಡಿ’ ಸೇರಿದಂತೆ ಹಲವಾರು ಚಿತ್ರ ಪ್ರೇಮಿಗಳು ಆಕ್ಷೇಪವ್ಯಕ್ತಪಡಿಸಿದ್ದರಿಂದ ವಾರ್ತಾ ಇಲಾಖೆಯು ಸ್ಪಂದಿಸಿ ನಿರ್ದೇಶಕ ಗೋಪಿ ಪೀಣ್ಯ ನಿರ್ದೇಶನದ ಕೊಡವ ಭಾಷಾ ಚಿತ್ರ ‘ತ್ಳಂಗ್ ನೀರ್’ ಚಿತ್ರದ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ.
ನ.24 ಶುಕ್ರವಾರ ಬೆಳಗ್ಗೆ 9ಗಂಟೆಗೆ ಚಿತ್ರ ಪ್ರದರ್ಶನವಿದ್ದು ಉಚಿತ ಪ್ರವೇಶವಿದೆ. (ಕೆಸಿಐ,ಎಸ್.ಎಚ್)