ಕರ್ನಾಟಕ

2000 ಮುಖಬೆಲೆಯ ಖೋಟಾನೋಟು ಪತ್ತೆ

500 ಹಾಗೂ 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿ 2000 ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ಜನತೆಗೆ ಪರಿಚಯಿಸಿ ಇನ್ನು ಸರಿಯಾಗಿ ಮೂರು ದಿನವೂ ಕಳೆದಿಲ್ಲ. ಅದಾಗಲೇ ಚಿಕ್ಕಮಗಳೂರಿನಲ್ಲಿ 2000ಮುಖಬೆಲೆಯ ಖೋಟಾನೋಟು ಪತ್ತೆಯಾಗಿದ ಕುರಿತು ವರದಿಯಾಗಿದೆ.

ಚಿಕ್ಕಮಗಳೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ಬೆಳಿಗ್ಗೆ ಅಶೋಕ್  ಎಂಬವರಿಂದ ಈರುಳ್ಳಿ ಖರೀದಿಸಿ ಖೋಟಾನೋಟು ನೀಡಿದ್ದಾರೆ ಎನ್ನಲಾಗಿದೆ. 2000 ಮುಖಬೆಲೆಯ ನೋಟಿನ ತುದಿ ಹಾಗೂ ಮಧ್ಯದ ಭಾಗ ಅನುಮಾನಕ್ಕೆಡೆ ಮಾಡಿದೆ.

ನೋಟನ್ನು ಕತ್ತರಿಯಿಂದ ಕತ್ತರಿಸಲಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ತಿಳಿದುಬಂದಿದ್ದು, ಖೋಟಾನೋಟನ್ನು ನೋಡಿ ಜನ ಗಾಬರಿಯಾಗಿದ್ದಾರೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

Leave a Reply

comments

Related Articles

error: