ಪ್ರಮುಖ ಸುದ್ದಿಮೈಸೂರು

83ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಸುಗಮ ಸಂಚಾರ ಹಾಗೂ ಕಾರ್ಯಕ್ರಮವು ಸುಲಲಿತವಾಗಿ ನಡೆಯಲು ಸಹಕರಿಸಿ : ಡಾ.ಎ.ಸುಬ್ರಹ್ಮಣ್ಯೇಶ್ವರರಾವ್

ಮೈಸೂರು,ನ.22:- ನಗರದಲ್ಲಿ 24ರಿಂದ 26ರವರೆಗೆ ಮಹಾರಾಜ ಕಾಲೇಜು ಮೈದಾನದ ಆವರಣದಲ್ಲಿ  83ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಜನರು ಆಗಮಿಸಲಿದ್ದು, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸುಗಮ ಸಂಚಾರ ವ್ಯವಸ್ಥೆಗಾಗಿ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನತ್ತು ಯಾವುದೇ ಅಪರಾಧ ಕೃತ್ಯಗಳು ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಈ ಬಂದೋಬಸ್ತ್ ಕರ್ತವ್ಯಕ್ಕೆ ಒಟ್ಟು 900ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ 07 ಕೆ.ಎಸ್.ಆರ್ ಪಿ ತುಕಡಿ,08 ಸಿಎಆರ್ ತುಕಡಿಗಳು ಹಾಗೂ ತುರ್ತು ಸೇವೆಗಾಗಿ 05ಅಗ್ನಿಶಾಮಕ,06 ಆಂಬುಲೆನ್ಸ್ ವಾಹನಗಳನ್ನು ನಿಯೋಜಿಸಲಾಗಿದೆ. ಸಂಚಾರ ವ್ಯವಸ್ಥೆ ಸಮ್ಮೇಳನದ ಸಮಯದಲ್ಲಿ ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ವಾಹನ ಸಂಚಾರ ಮಾರ್ಗ ನಿರ್ಬಂಧ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ವಾಹನ ಸಂಚಾರ ಮಾರ್ಗ ನಿರ್ಬಂಧ

ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ನ.24ರಿಂದ 26ರವರೆಗೆ ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 11ಗಂಟೆಯವರೆಗೆ ಕೆಆರ್ ಬಿ ರಸ್ತೆಯಲ್ಲಿನ ಕೌಟಿಲ್ಯ ವೃತ್ತದಿಂದ ಏಕಲವ್ಯ ವೃತ್ತದವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಪಾರ್ಕಿಂಗ್ ವ್ಯವಸ್ಥೆ

ಮಹಾರಾಜ ಕಾಲೇಜು ಮೈದಾನದಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸಮಾರಂಭಕ್ಕೆ ಆಗಮಿಸುವ ವಾಹನಗಳಿಗೆ 1.ಮಹಾರಾಜ ಕಾಲೇಜು ಮೈದಾನದ ವೇದಿಕೆ ಹಿಂಭಾಗ ಅತಿಗಣ್ಯರ ವಾಹನಗಳು, ಆಂಬುಲೆನ್ಸ್ ಫೈರ್ ಟೆಂಡರ್, ಕಾರ್ಯಕ್ರಮ ಕಲಾವಿದರ ವಾಹನಗಳು, 2.ಅರಸು ಬೋರ್ಡಿಂಗ್ ಶಾಲೆ ಆವರಣ ಗಣ್ಯರ ವಾಹನಗಳ ಪಾರ್ಕಿಂಗ್,3.ಮಹಾರಾಜ ಕಾಲೇಜು ಮೈದಾನದ ಜಿಮ್ನಾಷಿಯಂ ಮುಂಭಾಗ ಮಾಧ್ಯಮದವರ ವಾಹನಗಳು, 4.ಶತಮಾನೋತ್ಸವ ಭವನದ ಮಹಾರಾಜ ಕಾಲೇಜು ಮೈದಾನದ ಆವರಣದಲ್ಲಿ ಸಾರ್ವಜನಿಕರ ಎಲ್ ಎಂ ವಿ/ದ್ವಿಚಕ್ರವಾಹನಗಳ ನಿಲುಗಡೆ, 5.ಯುವರಾಜ ಕಾಲೇಜು ಮೈದಾನದ ಆವರಣದಲ್ಲಿ ಸಾರ್ವಜನಿಕರ ದ್ವಿಚಕ್ರ/ಲ್ ಎಂವಿ ವಾಹನಗಳು, 6. ಕೆ.ಆರ್.ಬಿ ರಸ್ತೆಯಲ್ಲಿ ಏಕಲವ್ಯ ವೃತ್ತದಿಂದ ವಾಣಿ ವಿಲಾಸ ರಸ್ತೆ ಜಂಕ್ಷನ್ ವರೆಗೆ ಸಾರ್ವಜನಿಕರ ದ್ವಿಚಕ್ರ/ಎಲ್ ಎಂವಿ ವಾಹನಗಳು, 7.ಮಹಾರಾಜ ಜೂನಿಯರ್ /ಮಹಾರಾಣಿ ಕಾಲೇಜು ಟೆಂಪೋ ಟ್ರಾವಲರ್/ಬಸ್ಸುಗಳು, 8.ಓವಲ್ ಮೈದಾನದಲ್ಲಿ ಸಾರ್ವಜನಿಕರ ದ್ವಿಚಕ್ರ/ಎಂಎಲ್ ವಿ ವಾಹನಗಳನ್ನು ನಿಲ್ಲಿಸಲು ತಿಳಿಸಲಾಗಿದೆ.

ಸಾರ್ವಜನಿಕರು ನಿಗದಿಪಡಿಸಿದ ಸ್ಥಳಗಳಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಿ ಸುಗಮ ಸಂಚಾರ ಹಾಗೂ ಕಾರ್ಯಕ್ರಮವು ಸುಲಲಿತವಾಗಿ ನಡೆಯಲು ಸಹಕರಿಸುವಂತೆ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: