ಮೈಸೂರು

ಹಿತಚಿಂತಕ ಅಭಿಯಾನ/ ಸದಸ್ಯತ್ವ ಅಭಿಯಾನ ನ.13ರಿಂದ

ವಿಶ್ವ ಹಿಂದೂ ಪರಿಷತ್ ಮೈಸೂರು  ಇದರ ವತಿಯಿಂದ ನ.13 ರಿಂದ ನ.28 ರವರೆಗೆ ‘ಹಿತಚಿಂತಕ ಅಭಿಯಾನ/ ಸದಸ್ಯತ್ವ ಅಭಿಯಾನ’ ನಡೆಯಲಿದೆ ಎಂದು  ಕಾರ್ಯದರ್ಶಿ ಪ್ರದೀಶ್ ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನ.13 ರಂದು ಬೆ.10.30 ಕ್ಕೆ ಚಾಮುಂಡಿ ಬೆಟ್ಟದ ನಂದಿ ದೇವಸ್ಥಾನ ಮುಂದೆ ಶ್ರೀ ಸುತ್ತೂರು ಸ್ವಾಮೀಜಿಗಳು ಉದ್ಘಾಟನೆ ಮಾಡಲಿದ್ದಾರೆ. ನಂತರ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರನ್ನು ಸಂಪರ್ಕಿಸಿ ಪರಿಷತ್ತಿನ ಸದಸ್ಯರಾಗಬೇಕೆಂಬ ಮನವಿ ಮಾಡಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಜನಾರ್ಧನರಾವ್, ಮಹಿಳಾ ಅಧ್ಯಕ್ಷೆ ಸವಿತಾ ಫಾಟ್ಕ ಮತ್ತು ಮಹಿಳಾ ನಾಯಕಿ ಸರಸ್ವತಿ ಪ್ರಸಾದ್ ಹಾಜರಿದ್ದರು.

Leave a Reply

comments

Related Articles

error: