ಕರ್ನಾಟಕ

ರಾಜ್ಯದಲ್ಲಿ 184 ಟ್ರಾನ್ಸ್’ಫಾರ್ಮರ್ ಬ್ಯಾಂಕ್: ಸಚಿವ ಡಿ.ಕೆ.ಶಿವಕುಮಾರ್

ಸುವರ್ಣ ವಿಧಾನಸೌಧ ಬೆಳಗಾವಿ (ನ.22): ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ 184 ಟ್ರಾನ್ಸ್‍ಫಾರ್ಮರ್ ಬ್ಯಾಂಕ್‍ಗಳನ್ನು ಸ್ಥಾಪಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ರಾಜ್ಯ ರೈತರ ಹಿತದೃಷ್ಟಿಯಿಂದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ 184 ಟ್ರಾನ್ಸ್‍ಫಾರ್ಮರ್ ಬ್ಯಾಂಕ್‍ಗಳನ್ನು ಸ್ಥಾಪಿಸಲಾಗಿದ್ದು ಅರ್ಜಿ ಸಲ್ಲಿಸಿದ ಮೂರು ದಿನಗಳಲ್ಲಿಯೇ ಟ್ರಾನ್ಸ್‍ಫಾರ್ಮರ್ ಬದಲಾಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಕಾಂತರಾಜು ಅವರ ಪ್ರಶ್ನೆಗೆ ಉತ್ತರಿಸಿದರು.

ಅಲ್ಲದೆ, ರಾಜ್ಯದ ವಿದ್ಯುತ್ ಸರಬರಜು ಕಂಪನಿಗಳಲ್ಲಿ 142 ಟ್ರಾನ್ಸ್‍ಫಾರ್ಮರ್ ದುರಸ್ತಿ ಕೇಂದ್ರಗಳು ಕಾರ್ಯನಿರ್ವಹಿಸುತಿದ್ದು ಈವರೆಗೆ ರಾಜ್ಯದಲ್ಲಿ 2,12,803 ಹೊಸ ಟ್ರಾನ್ಸ್‍ಫಾರ್ಮರ್‍ಗಳನ್ನು ಖರೀಸಲಾಗಿದೆ ಎಂದು ವಿಧಾನ ಪರಿಷತ್‍ನಲ್ಲಿ ಮಂಗಳವಾರ ತಿಳಿಸಿದರು.

(ಎನ್‍ಬಿಎನ್‍)

Leave a Reply

comments

Related Articles

error: