ಮೈಸೂರು

ಭಾರತೀಯ ವೈದ್ಯಕೀಯ ಸತ್ಯಾಗ್ರಹ ನ.16 ರಂದು

ಭಾರತೀಯ ವೈದ್ಯಕೀಯ ಸಂಘವು ನ.16 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವೈದ್ಯಕೀಯ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುವುದು ಎಂದು ಸಂಘದ ಅಧ್ಯಕ್ಷ ಡಾ. ಬಸವನಗೌಡಪ್ಪ ಎಚ್. ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಷ್ಟ್ರ ಮಟ್ಟದಲ್ಲಿ ಬೃಹತ್ ‘ಭಾರತೀಯ ವೈದ್ಯಕೀಯ ಸತ್ಯಾಗ್ರಹ’ ನಡೆಸುತ್ತಿದ್ದೇವೆ. ಜೆ.ಕೆ. ಮೈದಾನದಿಂದ ನಾರಾಯಣ ‍ಶಾಸ್ತ್ರಿ ರಸ್ತೆ, ದೇವರಾಜ್ ಅರಸ್ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಜಾಥಾ ನಡೆಸಿ ಜಿಲ್ಲಾಧಿಕಾರಿಗಳಿಗೆ ಬೇಡಿಕೆಗಳ ಮನವಿ ಸಲ್ಲಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಡಾ. ಸುರೇಶ್ ರುದ್ರಪ್ಪ, ಜಂಟಿ ಕಾರ್ಯದರ್ಶಿ ಡಾ.ಜಯಂತ್ ಎಂ.ಎಸ್. ಖಜಾಂಚಿ ಡಾ.ಜಗನ್ನಾಥ್ ಬಾಬು ಮತ್ತು ಯೋಗಣ್ಣ ಹಾಜರಿದ್ದರು.

Leave a Reply

comments

Related Articles

error: