ಸುದ್ದಿ ಸಂಕ್ಷಿಪ್ತ
ವಾಗ್ದೇವಿ ಸೌಹಾರ್ಧ ಪತ್ತಿನ ಸಹಕಾರಿ ನಿ, ನೂತನ ಶಾಖಾ ಕಚೇರಿಗೆ ನ.27ರಂದು ಉದ್ಘಾಟನೆ
ಮೈಸೂರು, ನ. 22 : ಕೃಷ್ಣಮೂರ್ತಿಪುರಂನ ಶ್ರೀವಾಗ್ದೇವಿ ಸೌಹಾರ್ದ ಪತ್ತಿನ ಸಹಕಾರಿ ನಿ,.ದ ನೂತನ ಕಚೇರಿಗೆ ಅಗ್ರಹಾರದ ಚಾವಡಿ ಬೀದಿಯಲ್ಲಿ ನ.27ರ ಬೆಳಗ್ಗೆ 10ಕ್ಕೆ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಹೆಚ್.ವಿ.ರಾಜೀವ್ ಚಾಲನೆ ನೀಡುವರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಅರ್ಪಿತಾ ಸಿಂಹ ಪಾಲ್ಗೊಳ್ಳುವರು, ವಾಗ್ದೇವಿ ಸಹಕಾರಿಯ ಅಧ್ಯಕ್ಷ ಹೆಚ್.ಎನ್.ನವೀನ್ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)